Sunday, April 20, 2025
Google search engine

Homeರಾಜ್ಯಸುದ್ದಿಜಾಲಜಾನಪದ ಕಲೆಗಳಿಗೆ ಪ್ರೊತ್ಸಾಹ ಅಗತ್ಯ: ಪ್ರೊ. ಕಾಳೇಗೌಡ ನಾಗವಾರ

ಜಾನಪದ ಕಲೆಗಳಿಗೆ ಪ್ರೊತ್ಸಾಹ ಅಗತ್ಯ: ಪ್ರೊ. ಕಾಳೇಗೌಡ ನಾಗವಾರ

ರಾಮನಗರ: ಇಂದಿನ ಯುವಜನತೆ ನೆಲ ಮೂಲದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕು ಎಂದು ಹಿರಿಯ ಜಾನಪದ ವಿದ್ವಾಂಸರಾದ ಪ್ರೊ. ಕಾಳೇಗೌಡ ನಾಗವಾರ ಅವರು ಕರೆ ನೀಡಿದರು.

ಅವರು ಆ. 22ರ ಗುರುವಾರ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಜಾನಪದ ಲೋಕದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಮಹಾಕಾವ್ಯ ಗಾಯನ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆಯನ್ನು ಯುವ ಸಮೂಹಕ್ಕೆ ತಿಳಿಸಿಬೇಕು ಇಲ್ಲವಾದಲ್ಲಿ ಜಾನಪದ ಕಲೆ ಮುಂದಿನ ದಿನಗಳಲ್ಲಿ ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರ ಕಾಣುವ ಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯಗಳೇ ಭಾರತದ ವೈಶಿಷ್ಟ, ಪ್ರತಿಯೊಂದು ರಾಜ್ಯವೂ ಸಹ ವಿಶಿಷ್ಟ ಸಂಸ್ಕೃತಿಯಿದ ವಿಭಿನ್ನವಾಗಿ ಕಾಣುತ್ತದೆ, ಕರ್ನಾಟಕದ ಜಾನಪದ ಸಾಹಿತ್ಯವೂ ಅಕ್ಷರ ಸಾಹಿತ್ಯಕ್ಕಿಂತ ವಿಭಿನ್ನವಾಗಿದ್ದು, ಹೆಚ್ಚು ಅನುಭವಗಳಿಂದ ವ್ಯಕ್ತವಾಗಿವೆ ಎಂದರು.

ಜಾನಪದಕ್ಕೆ ಸಾಕಷ್ಟು ಇತಿಹಾಸವಿದೆ, ಇವುಗಳನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾದ ತೊಡಕು ಎಂದರೆ ಭಾಷೆ, ಜಾನಪದದಂತಹ ಜಾಗತಿಕ ಸಾಮ್ಯತೆಯುಳ್ಳ ವಿಷಯದ ಅಭ್ಯಾಸಕ್ಕೆ ಪ್ರತಿಯೊಂದು ಸಂಸ್ಕೃತಿಯ ಜಾನಪದದ ಸ್ಪಷ್ಟ ಅರಿವು ಅತ್ಯಗತ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಪದ ಗಾಯಕರಾದ ಡಾ. ಅಪ್ಪಗೆರೆ ತಿಮ್ಮರಾಜು ಅವರು ಮಾತನಾಡಿ, ಜಾನಪದ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ-ಬೆಳೆಸುವ ಕಾರ್ಯ ಆಗಬೇಕು, ಜಾನಪದ ಗೀತೆಗಳಲ್ಲಿ ಹಲವು ರೀತಿಯ ವಾದ್ಯಗಳಿವೆ. ಅವುಗಳನ್ನು ಯಾವ ರೀತಿಯಲ್ಲಿ ನುಡಿಸಿ, ತಾಳಕ್ಕೆ ತಕ್ಕಂತೆ ಯಾವ ರೀತಿಯಲ್ಲಿ ಲಯಬದ್ದವಾಗಿ ಹಾಡುಗಳನ್ನು ಹಾಡಬೇಕು ಎಂದು ತಿಳಿಸಿದರು.

ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು, ಯೂರೋಪ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಆ. 22 ರಂದು ವಿಶ್ವ ಜಾನಪದ ದಿನಾಚರಣೆ ಎಂದು ಆಚರಿಸುತ್ತಾರೆ,   ಆದರೆ ಸಾವಿರ ವರ್ಷಗಳ ಹಿಂದೆ ಕವಿರಾಜ ಮಾರ್ಗದಲ್ಲಿ ಕನ್ನಡ ಕಾವ್ಯವನ್ನು ಕಟ್ಟಿ ಹಾಡುವ ಪರಂಪರೆಯಿತ್ತು ಎಂದು ಶ್ರೀ ವಿಜಯ ಬಣ್ಣಿಸಿದ್ದಾರೆ. ಅದರರ್ಥ ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆಯೇ ಕನ್ನಡದಲ್ಲಿ ಜಾನಪದ ಪರಂಪರೆಯಿತ್ತು ಎಂಬುದು ತಿಳಿದು ಬರುತ್ತದೆ, ಜನಪದ ಪರಂಪರೆ ದೇಸಿ ಪರಂಪರೆ. ಅದು ಎಷ್ಟು ದೊಡ್ಡದು ಎಂದು ಕನ್ನಡ ಆದಿ ಕವಿ ಪಂಪ ಅವರು 10ನೇ ಶತಮಾನದಲ್ಲಿಯೇ ಅದರ ಮಹತ್ವವನ್ನು ವರ್ಣಿಸಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ಶ್ರೀಮಂತವಾದ ಹಾಗೂ ಅಪಾರ ವೈವಿಧ್ಯಮಯದ ಜನಪದ ಪರಂಪರೆ ಇಟ್ಟಿಕೊಂಡಿರುವ ದೇಶ ನಮ್ಮದು. ಹಿಂದಿ ಮಾತನಾಡುವ ನಾಲ್ಕೆöÊದು ರಾಜ್ಯಗಳು ಇದ್ದರೂ ಕೂಡ ಅಲ್ಲಿ ಇಷ್ಟರ ಮಟ್ಟಿಗೆ ಜನಪದ ಕಾವ್ಯ ಪ್ರಕಟವಾಗಿಲ್ಲ. ಕನ್ನಡದಲ್ಲಿ 21 ಮಹಾಕಾವ್ಯಗಳು ಪ್ರಕಟಕೊಂಡಿವೆ. ಅದರಲ್ಲಿ  ಮಲೆ ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಜುಂಜಪ್ಪನ ಕಾವ್ಯ ಈ 3 ಕಾವ್ಯಗಳು ಅತ್ಯಂತ ಪ್ರಸಿದ್ದವಾಗಿವೆ, ಅಷ್ಟರ ಮಟ್ಟಿಗೆ ಕರ್ನಾಟಕದ ಜನಪದ ಸಾಹಿತ್ಯ ಸಮೃದ್ಧಗೊಂಡಿದೆ. ಜನಪದ ದಿನವನ್ನು ಗೌರವಿಸುವ ಈ ದಿನಕ್ಕೆ ಅದರದ್ದೇ ಆದ ಮಹತ್ವವಿದೆ. ಅದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಜಾನಪದ ಗಾಯನವನ್ನು ಕೋಣನಕೊಪ್ಪಲು ಸಿದ್ದರಾಜು, ಕೈಲಾಸಮೂರ್ತಿ, ಮೋಹನ್ ಕುಮಾರ್ ಪ್ರಸ್ತುತ ಪಡಿಸಿದರು. ಕ್ಯುರೇಟರ್ ರವಿ ಎಂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ವಿದ್ವಾಂಸರಾದ ಶಿವಣ್ಣ, ಸಾಹಿತಿ ವಿಜಯ್ ರಾಂಪುರ, ಸು.ತ ರಾಮೇಗೌಡ, ಡಾ.ತೇಜಾವತಿ ಹಾಗೂ ಜಾನಪದ ಗಾಯಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular