ಹೊಸೂರು : ಅಂಗಾಂಗ ದಾನ ಮಾಡುವುದು ಎಂದರೆ ನೀವು ಯಾರಿಗಾದರೂ ಹೊಸ ಜೀವನವನ್ನು ನೀಡುತ್ತಿದ್ದೀರಿ ಎಂದರ್ಥ. ಆದರೆ ಅರಿವಿನ ಕೊರತೆಯಿಂದಾಗಿ ಜನರಲ್ಲಿ ಅಂಗಾಂಗ ದಾನದ ಬಗ್ಗೆ ತಪ್ಪುಕಲ್ಪನೆಗಳಿವೆ. ಈ ಕಾರಣದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮರಣಾನಂತರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸಲು ಪ್ರತಿವರ್ಷ ಆಗಸ್ಟ್ 13 ರಂದು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.
ಅವರು ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕೆ.ಆರ್.ನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗಾಂಗ ದಾನದ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗಾಂಗವನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಅಂಗ ದಾನ ಮಾಡುವುದರಿಂದ ಒಬ್ಬ ವ್ಯಕ್ತಿಗೆ ಹೊಸ ಜೀವನವನ್ನು ನೀಡಬಹುದು. ಆದರೆ ಈಗಲೂ ಅರಿವಿನ ಕೊರತೆಯಿಂದಾಗಿ ಅಂಗಾಂಗ ದಾನದ ಬಗ್ಗೆ ಜನರಲ್ಲಿನ ತಪ್ಪು ಕಲ್ಪನೆಯಿದೆ. ಈ ಕಾರಣದಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರನ್ನು ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಪಂಚದಾದ್ಯಂತ ಅದೆಷ್ಟೋ ಜನರು ನಿರ್ಣಾಯಕ ಅಂಗಗಳ ಅಗತ್ಯವನ್ನು ಹೊಂದಿದ್ದಾರೆ. ಮೂತ್ರಪಿಂಡ, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣು, ಶ್ವಾಸಕೋಶ ಮುಂತಾದ ಅಂಗಗಳನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಜೀವವನ್ನು ಉಳಿಸಬಹುದು ಎಂದು ನೆರದಿದ್ದ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ವಿಶ್ವ ಅಂಗ ದಾನವನ್ನು ಆಚರಿಸುವ ಉದ್ದೇಶವು ಗಾಯಗೊಂಡ ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾದದವರ (ಅಂಗಗಳ ಅಗತ್ಯವಿರುವವರ) ಜೀವವನ್ನು ಉಳಿಸುವುದಾಗಿದೆ. ವ್ಯಕ್ತಿಯ ಜೀವ ಉಳಿಸುವಲ್ಲಿ ಅಂಗಾಂಗ ದಾನ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಯಾವುದೇ ವಯಸ್ಸಿನ ವ್ಯಕ್ತಿಯೂ ಅಂದರೆ ಹುಟ್ಟಿನಿಂದ 65 ವರ್ಷ ವಯಸ್ಸಿನ ಒಳಗಿನ ವ್ಯಕ್ತಿ ತನ್ನ ಅಂಗಗಳನ್ನು ದಾನ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಸಂಖ್ಯೆಯು ಹೆಚ್ಚುತ್ತಿದೆ. ಇದರಿಂದ ಅದೆಷ್ಟೋ ಜೀವಗಳಿಗೆ ಹೊಸ ಜೀವನ ದೊರೆತಂತಾಗಿದೆ ಎಂದರು. ಮೆದಳು ನಿಷ್ಕ್ರೀಯಗೊಂಡಿದ್ದರೂ, ಇತರೆ ಅಂಗಗಳು ಕೆಲಸ ಮಾಡುತ್ತವೆ. ಆ ಸಮಯದಲ್ಲಿ, ಆ ವ್ಯಕ್ತಿಯ ಕಣ್ಣುಗಳು, ಹೃದಯ, ಕಿಡ್ನಿಗಳು, ಲಿವರ್, ಬೇರೆ ವ್ಯಕ್ತಿಗಳಿಗೆ ಜೋಡಿಸಲು ಉಪಯೋಗಕ್ಕೆ ಬರುತ್ತವೆ. ಮಣ್ಣಲ್ಲಿ ಮಣ್ಣಾಗುವ ದೇಹ ಆರು ಜನರ ಬಾಳಿಗೆ ಬೆಳಕಾಗುತ್ತದೆ. ಒಂದು ಹೆಮ್ಮೆಯ ಸಂಗತಿ ಎಂದರೆ, ಅಂಗಾಂಗ ಹೆಚ್ಚು ಮಾಡಿರುವುದು ಉತ್ತರ ಭಾರತೀಯರಿಗಿಂತ ದಕ್ಷಿಣ ಭಾರತೀಯರು ಹೆಚ್ಚು ಆಗಾಗಿ ಕಳೆದ ವರ್ಷ 2023 ರಲ್ಲಿ, ಭಾರತದಲ್ಲಿ 1023 ಅಂಗಾಂಗ ದಾನಗಳಾಗಿವೆ. ಅದರಲ್ಲಿ ತೆಲಂಗಾಣ 252,.,ನಂತರದ ಸ್ತಾನದಲ್ಲಿ ಕರ್ನಾಟಕ, 178 , ತಮಿಳನಾಡು 178, ಮಹಾರಾಷ್ಟ್ರ 148, ಗುಜರಾತ್ 146 , ಇದೆ. ಕಳೆದ ವರ್ಷ ತಮಿಳುನಾಡಿನಲ್ಲಿ, 75 ಬದಲಿ ಹೃದಯ ಜೋಡಣೆ ಆಗಿದೆ. ಕರ್ನಾಟಕದಲ್ಲಿ 35, ತೆಲಂಗಾಣ 35 ಆಗಿದೆ ಎಂದು ಮಾಹಿತಿ ನೀಡಿದರು.
2014 ರ ಅಂಗಾಂಗ ದಾನದ ಬಗ್ಗೆ ಇರುವ ಕಾನೂನಿಲ್ಲೂ ಕೆಲವು ಬದಲಾವಣೆ ತರ ಬೇಕಾಗುತ್ತದೆ. ಈ ಸಮಯದಲ್ಲಿ ಅಂಗಾಂಗ ದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ನಾ ವಿಧಿ ಭೋದಿಸಲಾಯಿತು.
ಪ್ರಾಂಶುಪಾಲರಾದ ದೊರೆಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ. ಉಪನ್ಯಾಕರಾದ ನಂದೀಶ್, ಪ್ರಭು, ಡಾ: ಸೌಮ್ಯ, ಡಾ: ಪ್ರಿಯದರ್ಶಿನಿ ಭಾಗವಹಿಸಿದ್ದರು.
ಜನರಿಗೆ ಅಂಗಾಂಗ ದಾನದ ಬಗ್ಗೆ ಅರಿವಿಲ್ಲ, ಇದನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು. ಇದರ ಅರಿವಿನಿಂದ ಅಂಗಾಂಗ ದಾನ ಮಾಡಲು ಮುಂದೆ ಬಂದರೆ ಖರ್ಚು ಕೂಡಾ ಕಡಿಮೆ ಆಗುತ್ತದೆ, ಸಾವಿರಾರು ಜನರ ಬದುಕು ಹಸನಾಗುತ್ತದೆ.
ಇದರಲ್ಲಿ ಮಾಧ್ಯಮಗಳ ಪಾತ್ರ ಬಹಳ ಜವಾಬ್ದಾರಿಯುತವಾಗಿರುತ್ತದೆ ಆದ್ದರಿಂದ ಆಗಾಗ್ಗೆ ನಡೆಯುವ ಅಂಗಾಂಗ ದಾನ ಮಾಡಿರುವವರ ಬಗ್ಗೆ ಹೆಚ್ಚಿನದಾಗಿ ಪ್ರಚಾರ ಮಾಡಿದರೆ ನಮ್ಮ ಜನರಿಗೆ ತಲುಪುತ್ತದೆ .
ಡಾ.ಡಿ.ನಟರಾಜು, ತಾಲೂಕು ಆರೋಗ್ಯಾಧಿಕಾರಿಗಳು.ಕೆ.ಆರ್.ನಗರ.