ಮಂಡ್ಯ: ತಾಲ್ಲೂಕಿನ ಯಲಿಯೂರು- ಮಂಡ್ಯ ನಡುವಿನ ಮಾರ್ಗದಲ್ಲಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ತಡವಾಗಿ ವರದಿಯಾಗಿದೆ. ಈ ಕುರಿತು ಇಂದು ಶುಕ್ರವಾರ ಬೆಳಿಗ್ಗೆ ೮ ಗಂಟೆಯಲ್ಲಿ ಮಂಡ್ಯ ರೈಲ್ವೇ ಹೊರಠಾಣೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಮೃತ ವ್ಯಕ್ತಿಯು ಸುಮಾರು ೪೦ ವರ್ಷ ವಯಸ್ಸಿನ ವ್ಯಕ್ತಿ ೫.೬ ಅಡಿ ಎತ್ತರವಿದ್ದಾರೆ. ಸಾಧಾರಣ ಮೈಕಟ್ಟು, ದುಂಡುಮುಖ, ಚಪ್ಪಟೆ ಮೂಗು, ತಲೆಯಲ್ಲಿ ಒಂದು ಇಂಚು ಉದ್ದದ ಕಪ್ಪು ಕೂದಲು, ಕಪ್ಪು ಬಣ್ಣದ ಮೀಸೆ ದಾಡಿ ಬಿಟ್ಟಿರುತ್ತಾರೆ. ಮೃತನ ಬಲಗೈಯಲ್ಲಿ ತ್ರಿಶೂಲ ಹಚ್ಚೆ ಮಾಕ್೯ ಮತ್ತು ಕುದುರೆ ಮುಖದ ಹಚ್ಚೆ ಮಾಕ್೯ ಇದೆ. ಬಲಗೈನಲ್ಲಿ ಹಳದಿ ದಾರ, ಕಪ್ಪು ದಾರ, ಬೆಸ್ಟ್ ಫ್ರೆಂಡ್ ರಬ್ಬರ್ ಬ್ಯಾಂಡ್ ಹಾಗೂ ಕತ್ತಿನಲ್ಲಿ ಹಿತ್ತಾಳೆ ಸರ ಇರುತ್ತದೆ.
ಹರಿದುಹೋದ ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್, ತಿಳಿ ನೀಲಿ ಬಣ್ಣದ ಅಂಡರ್‌ವೇರ್, ಹಳದಿ ಬಣ್ಣದ ಅರ್ಧ ತೋಳಿನ ಶಟ್೯, ಕಪ್ಪು ಬಣ್ಣದ ಬೆಲ್ಟ್, ಬಿಳಿ ಬಣ್ಣದ ಚಪ್ಪಲಿ ಹಾಗೂ ಎಡಕಿವಿಯಲ್ಲಿ ರೋಲ್ಡ್ ಗೋಲ್ಡ್ ಬಡ್ಸ್ ಇರುತ್ತದೆ. ಶವವನ್ನು ಮಿಮ್ಸ್ ಅಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೇ ಪೊಲೀಸ್ ಠಾಣೆಯ ದೂ: ೦೮೨೧-೨೫೧೬೫೭೯/೯೪೮೦೮೦೨೧೨೨ ಸಂಪರ್ಕಿಸಲು ವಿನಂತಿಸಿದ್ದಾರೆ.