ಮಂಡ್ಯ:ಮೈಶುಗರ್ ಕಾರ್ಖಾನೆಯಲ್ಲಿ ಯಾವ ಸಮಸ್ಯೆ ಕೂಡ ಇಲ್ಲ. ಸರಿಯಾದ ರೀತಿಯಲ್ಲಿ ಕಬ್ಬು ನುರಿಯುವ ಕೆಲಸ ನಡೆಯುತ್ತಿದೆ. ಕಬ್ಬು ಕಟಾವು ಕೂಡ ಕಾರ್ಮಿಕರು ಮಾಡ್ತಿದ್ದಾರೆ. ಆದರೆ ಮೈ ಶುಗರ್ ಕಾರ್ಖಾನೆ ಕಬ್ಬು ಕಟಾವು ಮಾಡುತ್ತಿಲ್ಲ ಎಂದು ಕೆಲವು ಕೀಡಿಗೇಡಿಗಳು ಕಾರ್ಖಾನೆ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿ ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಕಿಸಾನ್ ಘಟಕದಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಶಿವನಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೆಲವು ಕೀಡಿಗೇಡಿಗಳು ಕಾರ್ಖಾನೆ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ.
ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.