Friday, April 18, 2025
Google search engine

Homeರಾಜಕೀಯಲೋಕಸಭೆ ಬಳಿಕ ಪ್ರತಿಷ್ಠೆ ಕಣವಾಯ್ತು ಮಂಡ್ಯ ನಗರಸಭೆ!."ಸ್ವಾಮಿ"ಗಳ ನಡುವಿನ ಸಮರಕ್ಕೆ ಮತ್ತೆ ವೇದಿಕೆಯಾಗಲಿದೆಯ ಮಂಡ್ಯ?

ಲೋಕಸಭೆ ಬಳಿಕ ಪ್ರತಿಷ್ಠೆ ಕಣವಾಯ್ತು ಮಂಡ್ಯ ನಗರಸಭೆ!.”ಸ್ವಾಮಿ”ಗಳ ನಡುವಿನ ಸಮರಕ್ಕೆ ಮತ್ತೆ ವೇದಿಕೆಯಾಗಲಿದೆಯ ಮಂಡ್ಯ?

ಮಂಡ್ಯ: ಸಕ್ಕರೆ ನಗರಿ ಮಂಡ್ಯ ಜಿಲ್ಲೆ ಅಂದರೇ ಸಾಕು ಚುನಾವಣೆಗಳಿಗೆ ಸಾಕಷ್ಟು ಫೇಮಸ್. ಇಲ್ಲಿ ಯಾವುದೇ ಚುನಾವಣೆ ನಡೆದರೂ ಕೂಡ ಜಿದ್ದಾಜಿದ್ದಿ ಏರ್ಪಡುತ್ತದೆ. ಅದು ಲೋಕಲ್ ಚುನಾವಣೆ ಅಥವಾ ಲೋಕಸಭಾ ಚುನಾವಣೆ ಇರಬಹುದು. ಯಾವುದೇ ಎಲೆಕ್ಷನ್ ಇದ್ದರೂ ಜಿದ್ದಾಜಿದ್ದಿ ಅಂತೂ ತಪ್ಪಲ್ಲ. ಅದರಲ್ಲೂ ಇತ್ತಿಚೇಗೆ ಲೋಕಸಭಾ ಚುನಾವಣೆ ಮುಗಿದು, ಇದೀಗ ಜಿಲ್ಲೆಯಲ್ಲಿ ಲೋಕಲ್ ಸಮರ ಕೂಡ ಏರ್ಪಟ್ಟಿದೆ. ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ ಸ್ಥಾನದ ಚುನಾವಣೆ ನಡೆಯುತ್ತಿದೆ.

ಅಧ್ಯಕ್ಷಗಾದಿ ಹಿಡಿಯಲು ಮತ್ತೆ ಬದ್ಧ ವೈರಿಗಳ ನಡುವೆ ಮೆಗಾ ಫೈಟ್ ಶುರುವಾಗಿದ್ದು ಅಧಿಕಾರ ಉಳಿಸಿಕೊಳ್ಳುವುದು ಕುಮಾರಸ್ವಾಮಿಗೆ ಒಂದು ಕಡೆ ಪ್ರತಿಷ್ಠೆ ಯಾದರೆ ಅಧಿಕಾರ ಕಸಿದುಕೊಳ್ಳಲೇ ಬೇಕೆಂಬ ಹಠಕ್ಕೆ ಸಚಿವ ಚೆಲುವರಾಯಸ್ವಾಮಿ ಬಿದ್ದಿದ್ದಾರೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆಲುವು ಸಾಧಿಸಿ ಇದೀಗ ಕೇಂದ್ರದ ಸಚಿವರು ಕೂಡ ಆಗಿದ್ದಾರೆ. ಹೀಗಾಗಿ ಎಲ್ಲಾ ಚುನಾವಣೆಗಳನ್ನ ಕೂಡ ಗಮನಹರಿಸಬೇಕಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಲೋಕಲ್ ಫೈಟ್​ ಸಾಕಷ್ಟು ಕೂತುಹಲ ಮೂಡಿಸಿದೆ.

ಮಂಡ್ಯ ನಗರಸಭೆ ಚುನಾವಣೆ

ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ 2ನೇ ಅವಧಿಗೆ ಇದೇ ತಿಂಗಳು 28ರಂದು ನಡೆಯುತ್ತಿದ್ದು, ಒಟ್ಟು 35 ಸದಸ್ಯರ ಬಲವೊಂದಿದ್ದು, ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದೆ. ಅದರಲ್ಲಿ ಕಾಂಗ್ರೆಸ್ 10, ಜೆಡಿಎಸ್​ 18, ಬಿಜೆಪಿ 2 ಹಾಗೂ ಪಕ್ಷೇತರ 5 ಸದಸ್ಯರು ಇದ್ದಾರೆ. ಇದರ ಜೊತೆಗೆ ಜೆಡಿಎಸ್ ಎಂಪಿ ಹಾಗೂ ಕಾಂಗ್ರೆಸ್ ಎಮ್​ಎಲ್​ಎಗೆ ಮತದಾನದ ಹಕ್ಕಿದೆ. ಮ್ಯಾಜಿಕ್ ನಂಬರ್ 19 ಇದ್ದು, ಹೀಗಾಗಿ ಜೆಡಿಎಸ್ ಶತಾಯ ಗತಾಯ ಅಧಿಕಾರಕ್ಕೆ ಏರಲು ತಯಾರಿ ಮಾಡುತ್ತಿದೆ. ಆದರೆ, ಜೆಡಿಎಸ್​ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಜೆಡಿಎಸ್ ಬಿಜೆಪಿ ಹಾಗೂ ಪಕ್ಷೇತರರನ್ನ ಸೆಳೆದು ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದೆ.

ಹೀಗಾಗಿ ಕುದುರೆ ವ್ಯಾಪಾರ ಕೂಡ ಜೋರಾಗಿದ್ದು, ಕೆಲವಷ್ಟು ಸದಸ್ಯರಿಗೆ ಪ್ರವಾಸದ ಭಾಗ್ಯ ಕೂಡ ಕಲ್ಪಿಸಲಾಗಿದೆ. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಲೋಕಲ್ ಸಮರದ ಕಾವು ಜೋರಾಗಿದೆ. ಯಾರಿಗೆ ಗದ್ದುಗೆ ಎನ್ನುವುದನ್ನ ಕಾದು ನೋಡಬೇಕು.






RELATED ARTICLES
- Advertisment -
Google search engine

Most Popular