Saturday, April 19, 2025
Google search engine

Homeರಾಜ್ಯವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ಹೆಚ್ಚಳ, ಆಗಸ್ಟ್‌ 1ರಿಂದಲೇ ಅನ್ವಯ

ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಪೆಂಡ್ ಹೆಚ್ಚಳ, ಆಗಸ್ಟ್‌ 1ರಿಂದಲೇ ಅನ್ವಯ

ಬೆಂಗಳೂರು: ಶೇ.100ರಷ್ಟು ಸ್ಟೈಪೆಂಡ್ ಹೆಚ್ಚಳಕ್ಕೆ ಆಗ್ರಹಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ, ಶೇ.25ರಷ್ಟು ಸ್ಟೈಪೆಂಡ್​​ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವರ ಭರವಸೆ ಬೆನ್ನಲ್ಲೇ ವಿದ್ಯಾರ್ಥಿಗಳು ಮುಷ್ಕರ ವಾಪಸ್ ಪಡೆದಿದ್ದಾರೆ. ಆ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರಕ್ಕೆ ಮಣಿದ ಕರ್ನಾಟಕ ರಾಜ್ಯ ಸರಕಾರ ಸ್ಟೈಪೆಂಡ್​ ಅನ್ನು ಶೇ.25ರಷ್ಟು ಹೆಚ್ಚಳ ಮಾಡಿದ್ದು ಆಗಸ್ಟ್‌ 1ರಿಂದಲೇ ಅನ್ವಯವಾಗಲಿದೆ.

ಪರಿಷ್ಕೃತ ವೇತನ ಹೀಗಿರಲಿದೆ:

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:
1ನೇ ವರ್ಷ – ರೂ. 45,000 ದಿಂದ 56,250
2ನೇ ವರ್ಷ- ರೂ. 50,000 ದಿಂದ 62,500
3ನೇ ವರ್ಷ- ರೂ. 55,000 ದಿಂದ 68,750

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:
1ನೇ ವರ್ಷ – ರೂ. 55,000 ದಿಂದ 68,750
2ನೇ ವರ್ಷ- ರೂ. 60,000 ದಿಂದ 75,000
3ನೇ ವರ್ಷ- ರೂ. 65,000 ದಿಂದ 81,250
ಸೀನಿಯರ್ ರೆಸಿಡೆಂಟ್ಸ್: ರೂ. 60,000 ದಿಂದ 75,000

ಮಂಜೂರಾದ ಸೀಟುಗಳು:
ಸ್ನಾತಕೋತ್ತರ- 3,540
ಸೂಪರ್ ಸ್ಪೆಷಾಲಿಟಿ- 445
ಸೀನಿಯರ್ ರೆಸಿಡೆಂಟ್- 527
ಒಟ್ಟು ಸೀಟುಗಳು- 4,312

RELATED ARTICLES
- Advertisment -
Google search engine

Most Popular