ರಾಮನಗರ:ಜಿಲ್ಲಾ ಪಂಚಾಯತ್, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕಲ್ಲಿನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಬನವಾಸಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಆರೋಗ್ಯ ಅಡಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು
ಸಮುದಾಯ ಆರೋಗ್ಯಾಧಿಕಾರಿ ರಾಘವೇಂದ್ರ ಜಗಂಡಭಾವಿ ಮಾತಾನಾಡಿ ಶಿಭಿರದ ಮುಖ್ಯ ಉದ್ದೇಶ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಿ ಮಧುಮೇಹ, ರಕ್ತದೊತ್ತಡ, ಕ್ಷಯರೋಗ, ಹೃದಯಾಘಾತ, ಪಾಶ್ವವಾಯು, ಕಿಡ್ನಿ ವೈಫಲ್ಯಗಳಂತ ಆರೋಗ್ಯ ಸಮಸ್ಯೆಗಳನ್ನು ಪೂರ್ವದಲ್ಲೇ ಅರಿತುಕೊಂಡು ವ್ಯವಸ್ಥಿತಿ ಚಿಕಿತ್ಸಾ ಸೇವೆಯನ್ನು ಓದಗಿಸಿ ಅಕಾಲಿಕ ಮರಣದಂತಹ ಪರಿಸರದಿಂದ ರಕ್ಷಣೆ ನೀಡುವ ಸಲುವಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು ನರೇಗಾ ಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಆರೋಗ್ಯಕರ ಸಮಾಜ ನಿರ್ಮಿಸಲು ಸಹಕರಿಸುವಂತೆ ಹಾಗೂ ತಮ್ಮ ದಿನನಿತ್ಯ ಜೀವನವನ್ನು ಆರೋಗ್ಯದ ಚೌಕಟ್ಟಿನೊಳಗೆ ವೃದ್ಧಿಸಿಕೊಳ್ಳುವಂತ ಜನರು ಜಾಗೃತರಾಗಬೇಕು. ಪೌಷ್ಠಿಕಾಂಶಯುಕ್ತ ಪರಿಪಕ್ವ ಆಹಾರ ಸೇವನೆ, ದೇಹ ಶ್ರಮತೆ, ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಸಿದ್ದಾಂತದ ಮೂಲಕ ನಮ್ಮ ಅಭ್ಯುದಯವನ್ನು ಕಾಣಬೇಕು ಜೊತೆಗೆ ತಾಯಿ ಮತ್ತು ಮಕ್ಕಳ ಆರೋಗ್ಯ, ತಂಬಾಕು ಉತ್ವನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಸರ್ಕಾರದ ಆರೋಗ್ಯ ಸೇವಾ ಸೌಲಭ್ಯಗಳ ಕುರಿತಂತೆ ಜನರಿಗೆ ಹೆಚ್ಚಿನ ಅರಿವು ಅತ್ಯವಶ್ಯಕವಾಗಿದೆ ಎಂದು ಸಾರ್ವಜನಿಕರಿಗೆ ಅರಿವನ್ನು ಮೂಡಿಸಿದರು
ಶಿಬಿರದಲ್ಲಿ ಐಇಸಿ ತಾಲ್ಲೂಕು ಸಂಯೋಜಕ ಪ್ರಸನ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ ರಘು, ಸದಸ್ಯರಾದ ಗಿರಿಧರ್ ಕೆ ಬಿ, ಸದಾಶಿವಯ್ಯ, ಬಿಲ್ ಕಲೆಕ್ಟರ್ ಬಿ.ಎಂ ವೆಂಕಟೇಶ್, ಗ್ರಾಮ ಕಾಯಕ ಮಿತ್ರ ವೀಣಾ ಕೆ.ಆರ್ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು