ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ವಿಧಾನ ಸಭಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಿದಿಂದ ಟಿಕೆಟ್ ಪಡೆದು ಚುನಾವಣೆಗೆ ೩ ದಿನ ಮುಂಚೆ ನಾಪತ್ತೆಯಾಗಿ ಪಕ್ಷದ್ರೋಹ ಬಗೆದು ಈಗ ಮುಡಾ ಅಧ್ಯಕ್ಷರಾದ ಕೆ. ಮರೀಗೌಡರ ವಿರುದ್ಧ ಮಾತನಾಡುತ್ತಿರುವ ಮಾವಿನಹಳ್ಳಿ ಸಿದ್ದೇಗೌಡರಿಗೆ ಯಾವ ನೈತಿಕತೆ ಇದೆ ಎಂದು ಜಿ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್ ಕಿಡಿಕಾರಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಅವರುಚುನಾವಣೆಯ ಕೊನೆ ಹಂತದವರೆಗೂ ಮರೀಗೌಡರು ಪ್ರಚಾರ ನಡೆಸಿದರೂ ಸಹ ಅವರ ಮೇಲೆ ಆರೋಪ ಮಾಡಿದ ಸಿದ್ದೇಗೌಡರು ಈಗ ಪಕ್ಷದಕಾರ್ಯಕರ್ತರಲ್ಲಿಗೊಂದಲ ಉಂಟು ಮಾಡುತ್ತಿದ್ದಾರೆಎಂದು ಆರೋಪಿಸಿದರು. ಕಾಂಗ್ರೆಸ್ ಸೇವಾದಳದ ಮಾಜಿಅಧ್ಯಕ್ಷಜಯರಾಮೇಗೌಡ ಮಾತನಾಡಿ ಕಳೆದ ೧೦ ವರ್ಷಗಳಿಂದ ಚಾಮುಂಡೇಶ್ವರಿಕ್ಷೇತ್ರದಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವವರು ಮರೀಗೌಡರು ಈಗಜೆಡಿಎಸ್ ಪಕ್ಷದಿಂದ ಬಂದು, ಪಕ್ಷಕ್ಕೆದ್ರೋಹ ಬಗೆದ ಸಿದ್ದೇಗೌಡರಿಗೆ ಮರೀಗೌಡರ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ನಾಡನಹಳ್ಳಿ ರವಿ ಮಾತನಾಡಿಚಾಮುಂಡೇಶ್ವರಿಕ್ಷೇತ್ರದಲ್ಲಿ ಮರೀಗೌಡರೆಅಭ್ಯರ್ಥಿಯಾಗಬೇಕಾಗಿತ್ತು. ಆದರೆಎಲ್ಲಿಂದಲೋ ಬಂದ ಸಿದ್ದೇಗೌಡರಿಗೆ ಸಿದ್ದರಾಮಯ್ಯರವರು ಟಿಕೆಟ್ ನೀಡಿದರುಅಂತಹ ಮಹಾನ್ ನಾಯಕನಿಗೆದ್ರೋಹ ಮಾಡಿ ೮೩ ಸಾವಿರ ಮತ ನೀಡಿದ ಮತದಾರರಿಗೂ ಮೋಸ ಮಾಡಿಕೃತಜ್ಞತೆಯನ್ನು ಹೇಳದ ಸಿದ್ದೇಗೌಡರು ಈಗ ಮರೀಗೌಡರ ಬಗ್ಗೆ ಮಾತಾನಾಡುವುದಕ್ಕೆ ನಾಚಿಕೆಯಾಗುವುದಿಲ್ಲವೆಎಂದರು. ಕಾಂಗ್ರೆಸ್ ಮುಖಂಡ ಹೊಸಕಾಮನಕೊಪ್ಪಲು ಸ್ವಾಮಿ ಮಾತನಾಡಿಡಿ.ಕೆ. ಶಿವಕುಮಾರ್ ರವರು ಬಿ. ಫಾರಂಅನ್ನು ಮರೀಗೌಡರ ಕೈಗೆ ಕೊಟ್ಟು ಸಿದ್ದೇಗೌಡನನ್ನು ಗೆಲ್ಲಿಸಿಕೊಂಡು ಬರಬೇಕುಎಂದರುಆದರೆ ಈ ಸಿದ್ದೇಗೌಡ ಚುನಾವಣೆ ಹಿಂದಿನ ದಿನವೇ ಕದ್ದು ಹೋಗಿ ಸಿದ್ದರಾಮಯ್ಯರವರಿಗೆ ಮೋಸ ಮಾಡಿ ಈಗ ಮರೀಗೌಡರ ಬಗ್ಗೆ ಮಾತನಾಡುವುದಕ್ಕೆಯಾವ ನೈತಿಕತೆಇದೆ, ಮರೀಗೌಡರ ಬಗ್ಗೆ ಮತ್ತೆ ಪತ್ರಿಕಾಗೋಷ್ಠಿ ನಡೆಸಿದರೆ ನಿಮ್ಮ ಮನೆ ಮುಂದೆಉಗ್ರಪ್ರತಿಭಟನೆ ಮಾಡಬೇಕಾಗುತ್ತದೆಎಂದು ಎಚ್ಚರಿಸಿದ್ದರು.
ಚಾಮುಂಡೇಶ್ವರಿ ಬ್ಲಾಕ್‌ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ರವಿ ಮಾತನಾಡಿ ಸಿದ್ದೇಗೌಡರು ಚುನಾವಣೆಯನ್ನುಎದುರಿಸಲಾಗದೆಓಡಿಹೋಗಿ ಈಗಒಂದು ವರ್ಷದ ನಂತರ ಬಂದು ಮರೀಗೌಡರ ವಿರುದ್ಧ ಮಾತಾನಾಡುವುದನ್ನುಕ್ಷೇತ್ರದಜನ ಸಹಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿಜಿ.ಪಂ. ಮಾಜಿ ಸದಸ್ಯಜವರಪ್ಪ, ಧನಗಳ್ಳಿ ಬಸವರಾಜು, ಸ್ವಾಮೀಗೌಡ, ಹಿನಕಲ್‌ಉದಯ್ ಮತ್ತಿತರರು ಹಾಜರಿದ್ದರು.