ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಮಹಿಳಾ ಭಾಹವಹಿಸುವಿಕೆ ಕಡಿಮೆ ಇರುವ ನೀಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಘಟ್ಟ ಗ್ರಾಮದಲ್ಲಿ ಇಂದು ಮಹಿಳಾ ಕಾಯಕೋತ್ಸವನ್ನು ಆಚರಿಸಲಾಯಿತು.
ಮಹೀಳಾ ಕಾಯೋಕೋತ್ಸವವನ್ನು ಕುರಿತು ಮಾತನಾಡಿದ ತಾಲ್ಲೂಕು ಐಇಸಿ ಸಂಯೋಜಕಿ ಭವ್ಯ ಅವರು ನರೇಗಾ ಯೋಜನೆಯ ಮಾಹಿತಿಯ ಜೊತೆಗೆ ವೈಯಕ್ತಿಕ ಕಾಮಗಾರಿಗಳ ಪರಿಚಯ ಹಾಗೂ ನರೇಗಾ ಅನುದಾನದ ಮಾಹಿತಿ ನೀಡಿದರು.
ಮಹಿಳೆಯರಿಗೆ ಪುರುಷರಿಗೆ ಸಮಾನ ವೇತನ, ಸಮಾನ ಕೂಲಿ ಇರುವ ಕೆಲಸ ನರೇಗಾ ಯೋಜನೆಯಲ್ಲಿ ಮಾತ್ರ ಕಾಣಬಹುದಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಬೇಡಿಕೆ ಅರ್ಜಿಸಲ್ಲಿಸಿ ನೇರವಾಗಿ ಕೆಲಸವನ್ನು ಪಡೆಯಬಹುದು ಎಂದು ತಿಳಿಸಿದರು. ಸ್ಥಳದಲ್ಲೆ ದನದ ಕೊಟ್ಟಿಗೆ, ಕೈತೋಟ, ಮೇಕೆಶೆಡ್ಡು ಕಾಮಗಾರಿಗಳ ಬೇಡಿಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಐಇಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧು ಇದ್ದರು.