Sunday, April 20, 2025
Google search engine

Homeಸ್ಥಳೀಯಸಿನಿಮಾದಲ್ಲಿ ಸೃಜನಶೀಲರಿಗೆ ಅವಕಾಶ

ಸಿನಿಮಾದಲ್ಲಿ ಸೃಜನಶೀಲರಿಗೆ ಅವಕಾಶ


ಮೈಸೂರು: ಸಿನಿಮಾ ಸಮೂಹ ಕಲೆಯಾಗಿದ್ದು, ಸೃಜನಶೀಲ ಮನಸ್ಸುಳ್ಳವರಿಗೆ ಈ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಚಲನಚಿತ್ರ ನಿರ್ದೇಶಕ ನಾಗಶೇಖರ್ ಹೇಳಿದರು.
ಸಿದ್ಧಾರ್ಥನಗರದ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಚಿತ್ರಕಲೆ, ಛಾಯಾಗ್ರಹಣ, ಸಂಕಲನ, ಬೆಳಕು, ಸಂಗೀತ, ಧನಿ, ಗ್ರಾಫಿಕ್ಸ್ ಸೇರಿದಂತೆ ೨೪ಕ್ಕೂ ಹೆಚ್ಚು ವಿಭಾಗಗಳಿದ್ದು, ಇಷ್ಟದ ಕ್ಷೇತ್ರ ಆಯ್ದುಕೊಳ್ಳಬಹುದು. ಸಿನಿಮಾದಲ್ಲಿ ಎಲ್ಲವನ್ನೂ ಕಲಿಯಬಹುದು ಎಂದರು.
ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ಸಿನಿಮಾ ರೂಪುಗೊಳ್ಳುತ್ತದೆ. ಕೇವಲ ನಿರ್ದೇಶಕನ ಕೈಯಲ್ಲಿ ಸಿನಿಮಾ ಇರುವುದಿಲ್ಲ. ದೃಶ್ಯಕಾವ್ಯ ಸೃಷ್ಟಿಸಲು, ಕಥೆಯನ್ನು ಪ್ರೇಕ್ಷಕರ ಮನದಾಳಕ್ಕಿಸಲು ಎಲ್ಲ ವಿಭಾಗದವರ ಶ್ರಮವಿರುತ್ತದೆ ಎಂದರು.
ಎರಡೂವರೆ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕೆಂದರೆ ಸುಲಭವಾದ ಕಾರ್ಯವಲ್ಲ. ಕೆಲವೇ ಸೆಕೆಂಡುಗಳ ದೃಶ್ಯಕ್ಕೆ ದಿನಗಟ್ಟಲೆ ಶ್ರಮಿಸಿರುತ್ತಾರೆ ಎಂದು ಹೇಳಿದರು.
ಭಾರತೀಯ ಸಿನಿಮಾಗೆ ಶತಮಾನದ ಇತಿಹಾಸವಿದ್ದು, ಎಲ್ಲ ಕ್ಷೇತ್ರಗಳಂತೆ ಆಯಾ ಕಾಲಘಟ್ಟದಲ್ಲಿ ನಾವಿನ್ಯತೆಯನ್ನು ಸಾಧಿಸುತ್ತಲೇ ಬಂದಿದೆ. ಲಕ್ಷಾಂತರ ಜನರು ಕೆಲಸ ಮಾಡಿzರೆ. ಸಿನಿಮಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದರೆ ಒಳ್ಳೆಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಅದರಿಂದ ಮತ್ತಷ್ಟು ಉತ್ತಮ ಚಿತ್ರಗಳ ನಿರ್ಮಾಣ ಸಾಧ ಎಂದು ಪ್ರತಿಪಾದಿಸಿದರು.
ಸಿನಿಮಾವನ್ನು ಒಪ್ಪಿಕೊಳ್ಳದಿzಗ ಬೇಸರಿಸಿಕೊಳ್ಳಬೇಕಿಲ್ಲ. ಜನರು ಏನು ಬಯಸುತ್ತಿzರೆ. ನಾನು ಹೇಗೆ ಹೇಳಿದರೆ ಚೆನ್ನಾಗಿರುತ್ತದೆ ಎಂಬ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು. ಸುಂದರ ಕೃತಿ ರೂಪಿಸಲು ಶ್ರಮಿಸಬೇಕು. ಚಿತ್ರಕಥೆ, ಪೂರ್ವ ಸಿದ್ಧತೆಯೊಂದಿಗೆ ಅಂಗಳಕ್ಕಿಳಿಯಬೇಕು. ಆಗ, ಸಿನಿಮಾ ನಾವಂದುಕೊಂಡಿದ್ದಕ್ಕೂ ಮೀರಿ ಚೆನ್ನಾಗಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾವಾ ಉಪನಿರ್ದೇಶಕ ಎ.ದೇವರಾಜು ಇದ್ದರು.

RELATED ARTICLES
- Advertisment -
Google search engine

Most Popular