ಮೈಸೂರು: ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮಹಾಬೋಧಿ ಸಂಸ್ಥೆಯ ಮೆತ್ತಲೋಕ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಹಣ್ಣುಗಳು ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮದರ್ ತೆರೇಸಾ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳಿಕ ಮಾತನಾಡಿದ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಮದರ್ ತೆರೆಸಾ ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿ ಕಂಡ ಮಹಾನ್ ಚೇತನ ಎಂದರು.
ಭಾರತದಲ್ಲಿ ಸುಮಾರು ನಲವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಬಡರೋಗಿಗಳ ಸೇವೆ ಮಾಡಿದರು. ಅವರ ಸೇವೆ ಪರಿಗಣಿಸಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ವಿಶುದ್ಧ ಸಿಲವರ್ಧನ ಬಂತೆ ಜಿ, ಮೆತ್ತಲೋಕದ ಪಾಂಡು,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ಸ್ವಾಮಿ , ಮಹೇಶ್, ಮಹದೇವ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ,ಹರ್ಷಿತ್ ಎಸ್ ನಾಗೇಶ್ ಇನ್ನಿತರರು ಉಪಸ್ಥಿತರಿದ್ದರು.