ಮದ್ದೂರು: ಮದ್ದೂರು ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಸುಮಾರು 75 ಲಕ್ಷದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ ಚಾಲನೆ ನೀಡಿ ಬಳಿಕ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹೇಳಿಕೆ ಖಂಡಿಸಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯ ಗೆ 136 ಶಾಸಕರ ಬೆಂಬಲ ಇದೆ. ಜೊತೆಗೆ ಸಿದ್ದರಾಮಯ್ಯನವರಿಗೆ ರಾಜ್ಯವನ್ನ ಆಳುವ ಕೆಪಾಸಿಟಿ ಇರುವ ಕಾರಣಕ್ಕೆ ರಾಜ್ಯದ ಜನರು ಅವರನ್ನು ಆರಿಸಿ ಕಳಿಸಿದ್ದಾರೆ .
ಕುಮಾರಸ್ವಾಮಿಯವರಿಗೆ ಯಾವುದೇ ಕೆಲಸ ಇಲ್ಲ ಹಾಗಾಗಿ ಸಿದ್ದರಾಮಯ್ಯನವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ನಾವು ಲೋಕಸಭೆಯಲ್ಲಿ ಒಂದು ಸ್ಥಾನದಿಂದ ಈಗ 9 ಸ್ಥಾನಕ್ಕೆ ಬಂದಿದ್ದೇವೆ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ಗೆ ವೋಟಿನ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ಮದ್ದೂರು ಉದಯ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಸದ ಎಚ್ ಡಿ ಕುಮಾರಸ್ವಾಮಿ ರವರ ದಿಶಾ ಸಭೆಗೆ ನಮ್ಮ ಕಾಂಗ್ರೆಸ್ ಶಾಸಕರಿಗಾಗಿ ಅಥವಾ ಸಚಿವರಿಗೆ ಆಗಲಿ ಯಾವುದೇ ಆಹ್ವಾನ ಇಲ್ಲ ಯಾರನ್ನು ಕರೆದುಕೊಂಡು ಸಭೆ ನಡೆಸಿದ್ದಾರೋ ನಮಗೆ ಗೊತ್ತಿಲ್ಲ ಉಸ್ತುವರಿ ಸಚಿವರು ಅಮೆರಿಕದ ಅಕ್ಕ ಸಮ್ಮೇಳನಕ್ಕೆ ತೆರಳಿದ್ದಾರೆ ಎಂದರು.
ಸರ್ಕಾರ ಇರುವುದಕ್ಕೆ ಅಭಿವೃದ್ಧಿ ಕೆಲಸಗಳು ಆಗುತ್ತಿರುವುದು ದೇವೇಗೌಡ ಹಾಗೂ ಕುಮಾರಸ್ವಾಮಿ ಏನಾದರೂ ಇಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರಾ ಎಂದರು.