Saturday, April 19, 2025
Google search engine

Homeರಾಜ್ಯದರ್ಶನ್ ಜೈಲಿನಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ: ಸುಮಲತಾ ಅಂಬರೀಷ್ ಪ್ರತಿಕ್ರಿಯೆ

ದರ್ಶನ್ ಜೈಲಿನಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ: ಸುಮಲತಾ ಅಂಬರೀಷ್ ಪ್ರತಿಕ್ರಿಯೆ

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಜೈಲಿನಲ್ಲಿ ಕ್ರಿಮಿನಲ್ಸ್ ಅಲ್ಲದೆ ಇನ್ಯಾರ ಜತೆ ಇರೋಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸುಮಲತಾ ಹುಟ್ಟುಹಬ್ಬದ ಹಿನ್ನೆಲೆ ಇಂದು (ಆ.೨೭) ಅಂಬಿ ಸ್ಮಾರಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ವಿಲ್ಸನ್ ಗಾರ್ಡನ್ ನಾಗ ಜೊತೆ ದರ್ಶನ್ ಕಾಣಿಸಿಕೊಂಡ ವಿಚಾರವಾಗಿ ನಟಿ ಮಾತನಾಡಿ, ವಿವೇಚನೆ ಇಟ್ಟುಕೊಂಡು ಮಾತನಾಡೋಣ, ಜೈಲಿನಲ್ಲಿ ಯಾರು ಇರುತ್ತಾರೆ. ಜೈಲಿನಲ್ಲಿ ಇರುವುದೇ ಕ್ರಿಮಿನಲ್ಸ್ ಅಲ್ವಾ ಎಂದು ಹೇಳಿದ್ದಾರೆ.

ಅಲ್ಲಿ ಓಡಾಟ ನಡೆಸೋಕೆ ಯಾರು ಸಿಗುತ್ತಾರೆ. ಯಾವುದಾದ್ರೂ ಒಂದು ತಪ್ಪು ಮಾಡಿದವರೇ ಅಲ್ವಾ ಜೈಲಿಗೆ ಹೋಗೋದು ಎಂದು ದರ್ಶನ್ ರನ್ನು ಸಮರ್ಥಿಸಿಕೊಂಡು ಸುಮಲತಾ ಮಾತನಾಡಿದ್ದಾರೆ. ರಾಜಾತಿಥ್ಯದ ಬಗ್ಗೆ ಜೈಲಿಗೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಕೇಳಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಸೂಕ್ತ ಕ್ರಮ ತೆಗೆದುಕೊಳ್ತಾರೆ. ತನಿಖೆ ನಡೆಯುತ್ತಿದೆ ದರ್ಶನ್ ಈಗ ಆರೋಪಿ ಸ್ಥಾನದಲ್ಲಿದ್ದಾರೆ. ಜೈಲಿನಲ್ಲಿ ಉಳಿದವರನ್ನ ಬಿಟ್ಟು ದರ್ಶನ್ ರನ್ನೇ ಹೈಲೆಟ್ ಮಾಡುತ್ತಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular