ಮಂಡ್ಯ: ನಗರ ಸಭೆಯ ಅಧಿಕಾರವನ್ನು ಹಿಡಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಜೆಡಿಎಸ್ ೧ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಮತಗಳ ಅಂತರದಿಂದ ಪರಭವ ಗೊಂಡಿದೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ‘ಕಿಡ್ನಾಪ್, ಹೈಜಾಕ್ ನಿಂದ ಜೆಡಿಎಸ್ ಗೆಲುವು’ ಸಾಧಿಸಿದೆ . ನಾವು ಗೆದ್ದೆ ಗೆಲ್ಲುತ್ತಿದ್ದೋ. ಜೆಡಿಎಸ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್‌ನ ಇಬ್ಬರು ನಮಗೆ ಮತ ಹಾಕಲು ಹೇಳಿದ್ರು. ಆದರೆ ಓರ್ವನನ್ನು ಕಿಡ್ನಾಪ್ ಮಾಡಿದ್ದಾರೆ.
ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದಸ್ಯರು ಅವರ ಮನೆಯವರ ಜೊತೆ ಮಾತನಾಡಲು ಬಿಟ್ಟಿಲ್ಲ. ಫಿಲ್ಮ್ ಸ್ಟೈಲ್ ನಲ್ಲಿ ರಾಜಕೀಯ ಮಾಡಿ ಗೆದ್ದಿದ್ದಾರೆ. ವಾಮ ಮಾರ್ಗದಿಂದ ಅವರು ಅಧಿಕಾರ ಪಡೆದಿದ್ದಾರೆ.
14ನೇ ವಾರ್ಡ್‌ನ ಸದಸ್ಯ ಮಹದೇವು ಉಪಾಧ್ಯಕ್ಷ ಸ್ಥಾನಕ್ಕೆ ನಾಮಿನೇಶನ್ ಹಾಕಬೇಕು ಅಂತ ಬಂದಿದ್ರು. ಆಗ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಈ ಬಗ್ಗೆ ಅವರ ಮಗ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಹೈಜಾಕ್ ಮಾಡಿ ಜೆಡಿಎಸ್ ಅವರು ಗೆದ್ದಿದ್ದಾರೆ. ನಮ್ಮ ಜನಪ್ರಿಯತೆಯಿಂದ ನಮಗೆ 18 ಮತ ಬಂದಿದೆ ಎಂದು ಹೇಳಿದರು.