ಚಾಮರಾಜನಗರ : ಬೆಳ್ಳಂಬೆಳಗ್ಗೆಯಿಂದಲೇ ಮಳೆ ಆರಂಭಗೊಂಡಿದ್ದು, ಮಳೆಯಿಂದಾಗಿ ಜನರ ಸಂಚಾರ ಅಸ್ತವ್ಯಸ್ತವಾಗಿದೆ.
ಬೆಳಗ್ಗೆಯಿಂದಲೇ ಬೀಳುತ್ತಿರುವ ಮಳೆಯಿಂದ ಓಡಾಟಕ್ಕೂ ಅಡ್ಡಿಯಾಗಿದ್ದು,ತುಂತುರು ಮಳೆಯಿಂದ ರಕ್ಷಣೆಗಾಗಿ ಜನರು ಅಂಗಡಿಮುಗ್ಗಟ್ಟುಗಳ ಮುಂದೆ ನಿಂತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.
ನಿರಂತರ ಸುರಿಯುವ ಮಳೆಯ ಪರಿಣಾಮ : ಜಿಲ್ಲಾದ್ಯಂತ ಬೆಳಗ್ಗೆಯಿಂದಲೇ ಎಡಬಿಡದೇ ಮಳೆ ಬೀಳುತ್ತಿದೆ.ಮಳೆಯ ಪರಿಣಾಮ ದಿನನಿತ್ಯ ಬೀದಿ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಅಲ್ಲದೆ ದನ ಕರುಗಳ ಮೇವಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಏಕೆಂದರೆ ಮಳೆ ನಿಲ್ಲದೆ ದನ ಕರುಗಳನ್ನು ಮೇಯಿಸಲು ಬಿಡಲು ಸಾಧ್ಯವಾಗದ ಕಾರಣ. ಅದೇ ರೀತಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳು ಮಳೆ ಗಾಳಿಗೆ ನೆಲಕ್ಕುರುಳಿಯುತ್ತಿರುವುದರಿಂದ ತಾವು ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣ ತೆಗೆಯಲು ಸಾಧ್ಯವಾಗದ ಕಾರಣ ಸರ್ಕಾರದ ವತಿಯಿಂದ ಬೆಳೆ ಪರಿಹಾರವನ್ನು ಕೊಡುತ್ತಾರೋ ಇಲ್ಲವೋ ಎಂದು ಕಂಗಾಲಾಗಿದ್ದಾರೆ
