Saturday, April 19, 2025
Google search engine

Homeಅಪರಾಧಕಾನೂನುಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದ ನಟ ಚಿಕ್ಕಣ್ಣನಿಗೆ ಸಂಕಷ್ಟ : ವಿಚಾರಣೆಗೆ ಹಾಜರು

ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದ ನಟ ಚಿಕ್ಕಣ್ಣನಿಗೆ ಸಂಕಷ್ಟ : ವಿಚಾರಣೆಗೆ ಹಾಜರು

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಚಿಕ್ಕಣ್ಣ ಇಂದು ಗುರುವಾರ ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಚಿಕ್ಕಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ವಿಜಯನಗರದ ಬಸವೇಶ್ವರ ನಗರದಲ್ಲಿರುವ ಎಸಿಪಿ ಕಚೇರಿಯಲ್ಲಿ ನಟ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದಾರೆ.

ರೇಣುಕಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಚಿಕ್ಕಣ್ಣ ಈ ಹಿಂದೆ ನ್ಯಾಯಾಧೀಶರ ಮುಂದೆ ಸೆಕ್ಷನ್ ಸಿಆರ್‌ಪಿಸಿ ೧೬೪ರ ಅಡಿಯಲ್ಲಿ ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಭೇಟಿಯಾಗಿರುವುದು ಈಗ ಚಿಕ್ಕಣ್ಣನಿಗ ತಲೆನೋವಾಗಿ ಪರಿಣಾಮಿಸಿದೆ. ಸಾಧಾರಣವಾಗಿ ತನಿಖಾ ಹಂತದಲ್ಲಿರುವಾಗಲೇ ಸಾಕ್ಷಿಯಾದ ವ್ಯಕ್ತಿ ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡಿರುವುದು ಈಗ ತನಿಖಾ ತಂಡಕ್ಕೆ ಕೋಪ ತರಿಸಿದ್ದು, ಕಾನೂನಿನ ಅಡಿಯಲ್ಲಿ ಮತ್ತೆ ನಟ ಚಿಕ್ಕಣ್ಣ ಅವರಿಗೆ ನೋಟಿಸ್ ನೀಡಿ. ಭೇಟಿ ಸಂಬಂಧ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ. ಯಾವ ಉದ್ದೇಶಕ್ಕೆ ಆರೋಪಿಯನ್ನು ಭೇಟಿಯಾಗಿದ್ದೀರಿ ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular