ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ 21 ನೇ ಚಾತುರ್ಮಸ ಪ್ರಯುಕ್ತ ನಡೆದ ಶತ ಚಂಡಿ ಯಾಗ ಮತ್ತು ಸಂಪೂರ್ಣ ಶ್ರೀಮದ್ರಾಮಾಯಣ ಮಹಾಯಾಗ ಅಭೂತಪೂರ್ವ ವಾಗಿ ಸಂಪನ್ನ ಗೊಂಡಿದ್ದು, ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಭಿನಂದನೆ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಾಕಾಶ್ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥರ ಅದ್ಭುತವಾದ ಜ್ಞಾನ ಸಂಪತ್ತನ್ನು ಕೊಂಡಾಡಿದರು.
ಲೋಕ ಕಲ್ಯಾಣಕ್ಕಾಗಿ ಶ್ರೀ ಗಳು ಕೈಗೊಂಡಿರುವ ಧಾರ್ಮಿಕ ಕಾರ್ಯಗಳನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ದತ್ತ ಪೀಠಧಿಪತಿಗಳಾದ ಶ್ರೀ ಶ್ರೀ ಗಣಪತಿ ಸಚಿದಾನಂದ ಸ್ವಾಮಿಗಳ ಆಶೀರ್ವಾದದಿಂದ ಮತ್ತು ಮಾರ್ಗದರ್ಶನ ದಲ್ಲಿ ಶ್ರೀ ಮಠವೂ ಹೀಗೆ ನೂರು ಕಾಲ ಮೈಸೂರಿಗರಿಗೆ ಮತ್ತು ಇಡೀ ವಿಶ್ವಕ್ಕೆ ಸಕಲ ಸಂಮಂಗಲವನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ ಪ್ರವಾಸೋದ್ಯಮದಲ್ಲಿ ದೇಶವಿದೇಶದಿಂದ ಭಕ್ತವೃಂದವನ್ನು ಆಕರ್ಷಿಸುತ್ತದೆ, ಯಾವುದೇ ಜಾತಿಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ, ಕಳೆದ ಕೋವಿಡ್ ಸಂಧರ್ಭದಲ್ಲಿ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಕೆಲಸ ಮಾಡಿದ್ದಾರೆ
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ಹರೀಶ್, ಮುಳ್ಳೂರು ಸುರೇಶ್, ಕಡಕೋಳ ಜಗದೀಶ್, ಪ್ರಶಾಂತ್, ರಂಗನಾಥ್, ಮಿರ್ಲೆ ಪನೀಶ್, ಜ್ಯೋತಿ, ಲತಾ ಬಾಲಕೃಷ್ಣ, ನಾಗಶ್ರೀ, ಸುಚಿಂದ್ರ, ಶ್ರೀರಾಮ ಸೇನೆಯ ಸಂಜಯ್, ಸಂತೋಷ್ (ಶಂಭು),
ಶ್ರೀಕಾಂತ್, ಹೇಮಂತ್, ಮನು ಅಪ್ಪಿ, ಸಾಗರ್ ಚಕ್ರವರ್ತಿ, ಪುನೀತ್, ಹಾಗೂ ಇನ್ನಿತರರು ಹಾಜರಿದ್ದರು.