Saturday, April 19, 2025
Google search engine

Homeರಾಜ್ಯಬೆಸ್ಟ್ ಬ್ರ್ಯಾಂಡಿಂಗ್​, ಕಂಟೆಂಟ್, ಸೇಫ್ಟಿ: KSRTC ಮುಡಿಗೇರಿದ 16 ರಾಷ್ಟ್ರಮಟ್ಟದ ಪ್ರಶಸ್ತಿಗಳು

ಬೆಸ್ಟ್ ಬ್ರ್ಯಾಂಡಿಂಗ್​, ಕಂಟೆಂಟ್, ಸೇಫ್ಟಿ: KSRTC ಮುಡಿಗೇರಿದ 16 ರಾಷ್ಟ್ರಮಟ್ಟದ ಪ್ರಶಸ್ತಿಗಳು

ಬೆಂಗಳೂರು: ಹೊಸ ಹೊಸ ಬ್ರ್ಯಾಂಡ್​ಗಳ ಪರಿಚಯದ ಮೂಲಕ ಗಮನ ಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ)ಕ್ಕೆ ರಾಷ್ಟ್ರ ಮಟ್ಟದ 16 ಪ್ರಶಸ್ತಿಗಳು ಒಲಿದಿವೆ. 8 ವಿಡಿಯೋ -ವಿಐಡಿಇಎ, 5 ಎಮ್ಕ್ಯೂಬ್ -ಎಂಕ್ಯೂಬಿಇ ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿ ಸೇರಿ ಒಟ್ಟು 16 ಪುರಸ್ಕಾರಗಳು ಸಾರಿಗೆ ಸಂಸ್ಥೆಗೆ ಲಭಿಸಿವೆ.

ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಂದಿರುವ ಕುರಿತು ಕೆಎಸ್ಆರ್​ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತ ಮಾಹಿತಿ ನೀಡಿದೆ.

ಸಾರಿಗೆ ಸಂಸ್ಥೆಗೆ ಒಲಿದ ಪ್ರಶಸ್ತಿಗಳ ಮಾಹಿತಿ ಹೀಗಿದೆ:

1. ಪಲ್ಲಕ್ಕಿ ಬ್ರ್ಯಾಂಡಿಂಗ್​ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.
2. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್​ಲೈನ್​) ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.

3. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವಿಡಿಯೋ ಕಂಟೆಂಟ್.

4. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವಿಡಿಯೋ ಕಂಟೆಂಟ್.

5. ಪಲ್ಲಕ್ಕಿ ಬ್ರ್ಯಾಂಡಿಂಗ್​ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.

6. ಅಂಬಾರಿ ಉತ್ಸವದ ಬ್ರ್ಯಾಂಡಿಂಗ್​ಗಾಗಿ ಇನ್​ಸ್ಟಾಗ್ರಾಮ್​ ಕ್ಯಾಂಪೇನ್​ನಲ್ಲಿ ಅತ್ಯುತ್ತಮ ವಿಡಿಯೋ ಕಂಟೆಂಟ್.
7. ಅಶ್ವಮೇಧ ಬ್ರ್ಯಾಂಡಿಂಗ್​ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ – ಒಟ್ಟಾರೆ ಅತ್ಯುತ್ತಮ ವಿಡಿಯೋ ಕಂಟೆಂಟ್.
8. ಶ್ರೇಷ್ಠ ವಿಡಿಯೋ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ – ಕೆಎಸ್​ಆರ್​ಟಿಸಿ.

ಎಂ ಕ್ಯೂಬ್ ಪ್ರಶಸ್ತಿಗಳು:
1. ಬ್ರ್ಯಾಂಡಿಂಗ್​ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.
2. ಬ್ರ್ಯಾಂಡಿಂಗ್​ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್​ಲೈನ್​).
3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.
4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರ್ಯಾಂಡ್​ ಕಂಟೆಂಟ್.
5. ಬ್ರ್ಯಾಂಡಿಂಗ್​ಗಾಗಿ ಶ್ರೇಷ್ಠ ಆನ್​ಲೈನ್​ ಪಿಆರ್ ಕ್ಯಾಂಪೇನ್

ಇನ್ನು ನಿಗಮವು ಸಾರಿಗೆ ಸಂಜೀವಿನಿ – ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿರುತ್ತದೆ ಎಂದು ಕೆಎಸ್​ಆರ್​ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ‌.

ವಿಐಡಿಇಎ ಪ್ರಶಸ್ತಿ ಮತ್ತು ಎಂಕ್ಯೂಯುಬಿಇ ಪ್ರಶಸ್ತಿಗಳನ್ನು ಗುರುಗಾಂವ್​ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್​ಲೈನ್​ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಪ್ರಶಸ್ತಿ ಸಮಾರಂಭವು 2024 ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ನಿಗಮ ತಿಳಿಸಿದೆ.

RELATED ARTICLES
- Advertisment -
Google search engine

Most Popular