ಮಂಡ್ಯ: KRS ಡ್ಯಾಂ ಹಾಗೂ ವಿಸಿ ನಾಲಾ ವ್ಯಾಪ್ತಿಯ ಸಾವಡೇಗಳಿಗೆ ಅಧಿಕಾರಿಗಳು ಸುಮಾರು 8 ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದು ಸಂಬಳ ಬಾಕಿ ಉಳಿಸಿಕೊಂಡ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ನೀರು ಗಂಟಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಮಂಡ್ಯದ ಕಾವೇರಿ ನೀರಾವರಿ ಕಚೇರಿ ಬಳಿ ಸಾವಡೇಗಳು ಇಂದು ಮುಷ್ಕರ ನಡೆಸಿದ್ದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸುಮಾರು 650ಕ್ಕೂ ಹೆಚ್ಚು ಸಾವಡೇಗಳು KRS ಡ್ಯಾಂ ಹಾಗೂ ವಿಸಿ ನಾಲಾ ವ್ಯಾಪ್ತಿಯ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸಂಬಳ ನೀಡದೆ ಸಾವಡೇಗಳ ಜೀವನ ಅತಂತ್ರ ಸ್ಥಿತಿಯಲ್ಲಿದೆ.
ಬಾಕಿ ಉಳಿಸಿಕೊಂಡ ಸಂಬಳವನ್ನು ಕೊಡಬೇಕೆಂದು ಇಂದು ಕಾವೇರಿ ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅಧಿಕಾರಿಗಳು ,ಶಾಸಕರು, ಉಸ್ತುವಾರಿ ಸಚಿವರಿಗೆ ಸಿಬ್ಬಂದಿಗಳು ಮನವಿ ಪತ್ರ ಸಲ್ಲಿಸಿದರು.
ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಸಂಬಳ ನೀಡದೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ನಮ್ಮ ಕುಟುಂಬಸ್ಥರ ನಿರ್ವಹಣೆ ಸ್ಥಿತಿ ಅತಂತ್ರವಾಗಿದೆ. ಆದ್ದರಿಂದ ಬಾಕಿ ಉಳಿಸಿಕೊಂಡ 8 ತಿಂಗಳ ಸಂಬಳವನ್ನು ನೀಡಬೇಕೆಂದು ಮನವಿ ಮಾಡಿದರು. ಅಲ್ಲದೆ ಸಂಬಳ ನೀಡುವವರಿಗೆ ಮುಷ್ಕರ ಮುಂದುವರಿಸುವ ಬಗೆ ಎಚ್ಚರಿಕೆ ನೀಡಿದರು.