Saturday, April 19, 2025
Google search engine

Homeರಾಜಕೀಯಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ನಿಖಿಲ್ ವಿ ಶಂಕರ್ ಮತಯಾಚನೆ

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ನಿಖಿಲ್ ವಿ ಶಂಕರ್ ಮತಯಾಚನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ನಿಖಿಲ್ ವಿ ಶಂಕರ್ ಕೆ.ಆರ್.ನಗರ ತಾಲೂಕಿನ ವಿವಿಧ ಕಡೆ ಮತಯಾಚನೆ ಮಾಡಿ ತಮ್ಮನ್ನ‌ ಬೆಂಬಲಿಸುವಂತೆ ಮನವಿ ಮಾಡಿದರು.
ತಾಲೂಕಿನ ಗಂಧನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮತಯಾಚನೆ ಮಾಡಿದ ಅವರು ರಾಜ್ಯದಲ್ಲಿ ತಮ್ಮ ಪರ ಅಲೆ ಇದೆ ಎಂದು ಹೇಳಿದರು.

ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಐದು ವರ್ಷಗಳ ಕಾಲ ರಾಜ್ಯದಾದ್ಯಂತ ಪಕ್ಷದ ಸಂಘಟನೆ ಮಾಡಿದ್ದು ಈ ತಿಂಗಳು ನಡೆಯುವ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿದರೇ ಮುಖ್ಯಮಂತ್ರಿ ಸಿದ್ದರಾಯಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಗಂಧನಹಳ್ಳಿ ಹೇಮಂತ್, ಸಾಲಿಗ್ರಾಮ ತಾಲೂಕು‌ ಸಂಗೊಳ್ಳಿ ‌ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ ಮುಖಂಡರುಗಳಾದ ಲೋಹಿತ್ ಅರಸು, ಮಂಜುನಾಥ್, ಅರುಣ್, ಸಂತೋಷ್ ,ಕೆಂಪರಾಜು, ಚಂದ್ರಕಾಂತ್, ಕಿರಣ್ , ಮಂಜು, ಬೀರೇಶ್, ಅಭಿ, ಪ್ರತಾಪ್, ಈಶ್ವರ್ , ಹಾಜರಿದ್ದರು

RELATED ARTICLES
- Advertisment -
Google search engine

Most Popular