Saturday, April 19, 2025
Google search engine

Homeರಾಜ್ಯಯುವ ಜನತೆ ಬಿಜೆಪಿ ಸದಸ್ಯತ್ವ ಪಡೆಯಲು ಬಿ.ವೈ.ವಿಜಯೇಂದ್ರ ಕರೆ

ಯುವ ಜನತೆ ಬಿಜೆಪಿ ಸದಸ್ಯತ್ವ ಪಡೆಯಲು ಬಿ.ವೈ.ವಿಜಯೇಂದ್ರ ಕರೆ

ಬೆಂಗಳೂರು: ಪ್ರಸಕ್ತ 2024ರ ಸಾಲಿನ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದೀಗ ಇಡೀ ದೇಶದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರನ್ನು ತಮ್ಮ ಪಕ್ಷದ ಸದಸ್ಯರನ್ನಾಗಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಯುವ ಜನತೆ ಬಿಜೆಪಿ ಸದಸ್ಯತ್ವ ಪಡೆಯಲು ಕರೆ ನೀಡಿದ್ದಾರೆ.

ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು ಅವರ ನಾಯಕತ್ವದಲ್ಲಿ ದೇಶವು ಜಗತ್ ಒಂದೇ ಭಾರತ್ ಧ್ಯೇಯದೊಂದಿಗೆ ಸಾಗುತ್ತಿದ್ದು ಎಲ್ಲರೂ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ಈ ಲಿಂಕ್ ಬಳಸಿ https://t.co/EJFIebp0qY ಬಿಜೆಪಿ ಸದಸ್ಯರಾಗಿ ಎಂದು ಮನವಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿ.ವೈ.ವಿಜಯೇಂದ್ರ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಎರಡು ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮೊದಲ ಹಂತ ಸೆಪ್ಟೆಂಬರ್​ 2 ರಿಂದ 25 ಮತ್ತು ಎರಡನೇ ಹಂತ ಅಕ್ಟೋಬರ್​ 1 ರಿಂದ 15 ರವರೆಗೆ ನಡೆಯಲಿದೆ. 10 ಕೋಟಿಗೂ ಅಧಿಕ ಜನರನ್ನು ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.


RELATED ARTICLES
- Advertisment -
Google search engine

Most Popular