ಮೈಸೂರು : ಬೀದಿ ನಾಯಿಗಳ ಹಾವಳಿಗೆ ಎರಡು ವರ್ಷದ ಹಸು ಬಲಿಯಾಗಿರುವ ಘಟನೆ ಸೋಮವಾರ ತಡರಾತ್ರಿ ಸಿದ್ದಾರ್ಥ ಬಡಾವಣೆಯ ಲಲಿತ ಮಹಲ್ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ನಾಯಿಗಳು ಹಸುವಿನ ಮೇಲೆ ದಾಳಿ ನಡೆಸಿ ಅದರ ಮುಖ ಹಾಗೂ ಹಿಂಬದಿಯನ್ನು ತಿಂದುಹಾಕಿವೆ.
ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.