Saturday, April 19, 2025
Google search engine

Homeರಾಜ್ಯಸುದ್ದಿಜಾಲಬದುಕಿನಲ್ಲಿ ಬದಲಾವಣೆ ತರುವ ಶ್ರಾವಣ: ಡಾ. ಬಿ.ವಿ. ವಸಂತಕುಮಾರ್

ಬದುಕಿನಲ್ಲಿ ಬದಲಾವಣೆ ತರುವ ಶ್ರಾವಣ: ಡಾ. ಬಿ.ವಿ. ವಸಂತಕುಮಾರ್

ಮೈಸೂರು: ಲೌಕಿಕ ಜಂಜಾಟಗಳಲ್ಲಿ ಮುಳಗಿ ಹೋಗಿರುವ ಮನುಷ್ಯನ ಬದುಕಿನಲ್ಲಿ ಹೊಸ ಬದಲಾವಣೆಯನ್ನುತರುವಲ್ಲಿ ಶ್ರಾವಣ ಮಾಸಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಕರ್ನಾಟಕ ಸಾಹಿತ್ಯಅಕಾಡೆಮಿಯ ಮಾಜಿ ಅಧ್ಯಕ್ಷರು ಡಾ. ಬಿ.ವಿ. ವಸಂತಕುಮಾರ್‌ರವರು ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಸಮಾರೋಪದಲ್ಲಿ ಮಾತನಾಡುತ್ತಾ ತಿಳಿಸಿದರು.

ಸೃಷ್ಟಿಯ ವಿಕಾಸದ ಬಹುದೊಡ್ಡ ಪ್ರಕ್ರಿಯೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ.ಮಳೆಯಿಂದ ಗಿಡ-ಮರಗಳು ಚಿಗುರಿ ಬಲಿಷ್ಠವಾಗುತ್ತವೆ. ರೈತರು ಬಿತ್ತಿದ ಬೆಳೆಗಳು ತೆನೆ ಬಿಡುವ ಸಂದರ್ಭವಿದು. ಹಾಗೆಯೇ ಮನುಷ್ಯನ ಜೀವನದಲ್ಲೂ ಹೊಸ ಹುಟ್ಟು ಮತ್ತು ಬೆಳವಣಿಗೆಗೆ ಶ್ರಾವಣ ಮಾಸ ಸಕಾಲವಾದುದು. ನಿಸರ್ಗದಂತೆ ಮನುಷ್ಯನು ಶಾರೀರಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಯನ್ನು ಈ ಮಾಸದಲ್ಲಿ ಪಡೆದುಕೊಳ್ಳುತ್ತಾನೆ. ಬದುಕಿನ ಬದಲಾವಣೆಗೆಇದು ಸುಸಂದರ್ಭವಾದ ಕಾಲ. ನಮ್ಮನ್ನು ನಾವು ಅರಿತುಕೊಂಡು ನಡೆ-ನುಡಿಯಲ್ಲಿ ಸದ್ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಡಾ. ಕೆ.ಅನಂತರಾಮುರವರುಶ್ರಾವಣದಲ್ಲಿ ಭೂಮಿ ಹದವಿರುವಂತೆ ಮನುಷ್ಯನ ಮನಸ್ಸು ಹದವಾಗಿರುತ್ತದೆ.ಇಂತಹ ಸಂದರ್ಭದಲ್ಲಿ ಭೂಮಿಯಲ್ಲಿ ಉತ್ತಮ ಬೀಜ ಬಿತ್ತಿದಂತೆ ನಮ್ಮ ಮನಸ್ಸಿನಲ್ಲಿಯೂ ಭಕ್ತಿ ಎಂಬ ಬೀಜದ ಸದ್ವಿಚಾರಗಳನ್ನು ಬಿತ್ತಿದರೆಉತ್ತಮ ಫಸಲನ್ನು ಪಡೆಯಬಹುದು.ಒಮ್ಮೆ ಮಳೆ, ಒಮ್ಮೆ ಬಿಸಿಲು, ಒಮ್ಮೆ ನಗು, ಒಮ್ಮೆ ಅಳು ಇದುವೇ ನಮ್ಮಜೀವನಅದೇ ಶ್ರಾವಣಎಂದುಕವಿಯು ಶ್ರಾವಣವನ್ನುಅತ್ಯಂತಅರ್ಥಪೂರ್ಣವಾಗಿ ವರ್ಣಿಸಿದ್ದಾನೆಎಂದು ತಿಳಿಸಿದರು.

ಮೈಸೂರುಶ್ರೀ ನೀಲಕಠಸ್ವಾಮಿ ಮಠದವಿದ್ವಾನ್ ಶ್ರೀ ಸಿದ್ಧಮಲ್ಲ ಸ್ವಾಮಿಗಳು ಸುತ್ತೂರು ಶ್ರೀಮಠದಲ್ಲಿ ರಾಜೇಂದ್ರ ಶ್ರೀಗಳ ಕಾಲದಿಂದಲೂ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ನಾವು ಆಗಲೂ ಪ್ರವಚನ ಕೇಳಲು ಬರುತ್ತಿದ್ದೆವು. ಪರಮಪೂಜ್ಯ ದೇಶಿಕೇಂದ್ರ ಜಗದ್ಗುರುಗಳವರ ದೂರದೃಷ್ಟಿಯ ಫಲವಾಗಿ ಇಂದು ಶ್ರೀಮಠದಲ್ಲಿ ಇಂತಹ ಅನೇಕ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಮೊಬೈಲ್‌ಯುಗದಲ್ಲೂ ಅನೇಕ ಜನರು ಆಗಮಿಸಿ ಮಾಸಪೂರ್ತಿ ಒಳ್ಳೆಯ ವಿಚಾರಗಳನ್ನು ಆಲಿಸಿರುವಿರಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಹುಲಿಯೂರುದುರ್ಗದ ಶ್ರೀ ಸಿದ್ಧಲಿಂಗ ಶಿವಾನಂದ ಸ್ವಾಮಿಗಳುದಾರಿತಪ್ಪುತ್ತಿರುವ ಮನುಷ್ಯ ನೈತಿಕ ಮಾರ್ಗದಲ್ಲಿ ನಡೆಯಲು ಪೂಜ್ಯರುಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಶ್ರಾವಣ ಮಾಸದ ಪೂಜಾನುಷ್ಠಾನದಿಂದ ಸೃಷ್ಟಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಗುರುಗಳು ಮಾಡುವ ಅನುಷ್ಠಾನದ ಫಲ ಸಾರ್ವತ್ರಿಕವಾಗಿಎಲ್ಲರಿಗೂ ಲಭ್ಯವಾಗುತ್ತದೆ. ಭಕ್ತಿಯಿಂದಬದುಕಿನಲ್ಲಿಏನನ್ನಾದರೂ ಸಾಧಿಸಬಹುದುಎಂದು ಹೇಳಿದರು. ಹೊಸಮಠ ಮತ್ತುಕುದೇರು ಮಠದಕಿರಿಯ ಶ್ರೀಗಳು ಆಗಮಿಸಿದ್ದರು. ಶ್ರೀಮತಿ ಜಲಜಾಕ್ಷಿ, ಶ್ರೀಮತಿ ಉಮಾ ನಾಗೇಶ್‌ರವರು ಅನಿಸಿಕೆ ಹಂಚಿಕೊಂಡರು.

ವಿದುಷಿ ಧರಿತ್ರಿಆನಂದರಾವ್‌ರವರು ಕಾವ್ಯ ವಾಚನ ಮಾಡಿದರು. ವಿದುಷಿ ಎಂ.ವಿ. ಶುಭಾರಾಘವೇಂದ್ರ, ವಿದುಷಿ ವಸಂತ ವೆಂಕಟೇಶರವರುಗಳು ಉಪಸ್ಥಿತರಿದ್ದರು. ಪ್ರವಚನ ಆಲಿಸಿ ಉತ್ತಮ ಪ್ರಬಂಧ ರಚಿಸಿದವರಿಗೆ ಬಹುಮಾನ ವಿತರಿಸಲಾಯಿತು.ಶ್ರೀ ಯು.ಎಸ್. ಬಸವರಾಜು, ಕೆ.ಎನ್. ರವಿಶಂಕರ್ ಮತ್ತು ಕುಟುಂಬದವರು ಸೇವಾರ್ಥ ನೆರವೇರಿಸಿದರು. ಜೆಎಸ್‌ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು. ಪ್ರೊ.ಮೊರಬದ ಮಲ್ಲಿಕಾರ್ಜುನರವರ ಸ್ವಾಗತಿಸಿದರು. ಮಲ್ಲಿನಾಥ ಶಿವಾಚಾರ್ಯ ಸ್ವಾಮಿಗಳು ವಂದಿಸಿದರು. ಕುಮಾರಸ್ವಾಮಿ ವಿರಕ್ತಮಠಕಾರ್ಯಕ್ರಮ ನಿರೂಪಿಸಿದರು. ಭಕ್ತಾದಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular