ಬೆಂಗಳೂರು: ಪ್ರಾಥಮಿಕ ಶಾಲೆಗಳ 20 ಹಾಗೂ ಪ್ರೌಢಶಾಲೆಗಳ 11 ಶಿಕ್ಷಕರನ್ನು 2024–25ನೇ ಸಾಲಿನ ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಶಿಕ್ಷಕರ ಪಟ್ಟಿ ಬಿಡುಗಡೆಯಾಗಿದ್ದು, ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ₹25 ಸಾವಿರ ನಗದು ನೀಡಿ, ಗೌರವಿಸಲಾಗುತ್ತೆ.
ಶಿಕ್ಷಕರ ಪಟ್ಟಿ ಈ ಕೆಳಗಿನಂತಿದೆ.
- ಚಿಕ್ಕೋಡಿ ಉಳ್ಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ,
- ಕಲಬುರಗಿ ಜಿಲ್ಲೆ ಭೂಸಣಗಿಯ ಮಲ್ಲಿಕಾರ್ಜುನ ಎಸ್. ಸಿರಸಿಗಿ,
- ದಾವಣಗೆರೆ ಜಿಲ್ಲೆ ಹಿಂಡಸಘಟ್ಟ ಕ್ಯಾಂಪ್‌ನ ಬಿ. ಅರುಣ್‌ಕುಮಾರ್,
- ಮೈಸೂರು ಜಿಲ್ಲೆ ಹಿನಕಲ್‌ನ ಕೆ.ಎಸ್. ಮಧುಸೂದನ್,
- ಬೆಳಗಾವಿ ಜಿಲ್ಲೆ ಅಂಬೇವಾಡಿಯ ಅಸ್ಮಾ ಇಸ್ಮಾಯಿಲ್,
- ದಕ್ಷಿಣ ಕನ್ನಡದ ನೀರ್ಕೆರೆ ಮೂಡಬಿದ್ರಿಯ ಕೆ. ಯಮುನಾ,
- ಹಾವೇರಿ ಜಿಲ್ಲೆಯ ಜಮೀರ್ ಅಬ್ದುಲ್,
- ಬೆಂಗಳೂರು ದಕ್ಷಿಣ ಜಿಲ್ಲೆಯ ಚಂದಾಪುರದ ಜಿ. ರಂಗನಾಥ,
- ಚಿಕ್ಕಬಳ್ಳಾಪುರ ಜಿಲ್ಲೆಯ ಇನಮಿಂಚೇನಹಳ್ಳಿಯ ಸುಶೀಲಮ್ಮ,
- ಮಧುಗಿರಿಯ ಬಸವನಹಳ್ಳಿಯ ಎಸ್.ವಿ. ರಮೇಶ್,
- ಧಾರವಾಡ ಜಿಲ್ಲೆ ಹಳೇಹುಬ್ಬಳ್ಳಿಯ ಹನುಮಂತಪ್ಪ ಎಂ. ಕುಂದರಗಿ,
- ಚಿತ್ರದುರ್ಗ ಜಿಲ್ಲೆ ಹೊಸಹಟ್ಟಿಯ ಆರ್.ಟಿ. ಪರಮೇಶ್ವರಪ್ಪ,
- ಶಿರಸಿ ಜೋಗೇಶ್ವರ ಹಳ್ಳದ ರಾಮಚಂದ್ರ ಶೇಷಾಜಪ್ಪ ಕಲಾಲ,
- ಶಿವಮೊಗ್ಗ ಗುತ್ಯಪ್ಪ ಕಾಲೊನಿಯ ಎಂ. ಭಾಗೀರಥಿ,
- ವಿಜಯನಗರ ಜಿಲ್ಲೆ ಹಿರೇಕೊಳಚಿಯ ಎಲ್. ಮಧುನಾಯ್ಕ,
- ರಾಮನಗರ ಜಿಲ್ಲೆ ಅರಳಾಳುಸಂದ್ರದ ಪಿ. ಸುರೇಶ,
- ಯಾದಗಿರಿ ಜಿಲ್ಲೆ ಬಸ್ಸಾಪುರದ ನೀಲಪ್ಪ ಎಸ್. ತೆಗ್ಗಿ,
- ಉತ್ತರ ಕನ್ನಡ ಜಿಲ್ಲೆಯ ಹೊನ್ನೆಮಡಿಯ ರಾಘವೇಂದ್ರ ಎಸ್. ಮಡಿವಾಳ,
- ದೊಡ್ಡಬಳ್ಳಾಪುರದ ಬೀಡಿಕೆರೆಯ ಎಚ್.ಎಂ. ಮಂಗಳಕುಮಾರಿ,
- ಗದಗ ಜಿಲ್ಲೆ ಬಸಾಪುರದ ರತ್ನಾಬಾಯಿ.
ಪ್ರೌಢಶಾಲಾ ಶಿಕ್ಷಕರು:
- ಚಿಕ್ಕಮಗಳೂರು ಜಿಲ್ಲೆ ಲೋಕನಾಥಪುರದ ಆರ್.ಡಿ.ರವೀಂದ್ರ,
- ಬೆಂಗಳೂರು ಗ್ರಾಮಾಂತರದ ಟಿ. ಬೇಗೂರಿನ ಟಿ.ಕೆ. ರವಿಕುಮಾರ್,
- ಉತ್ತರ ಕನ್ನಡ ಹಿರೇಗುತ್ತಿಯ ಮಹಾದೇವ ಬೊಮ್ಮಗೌಡ,
- ಶಿವಮೊಗ್ಗ ಜಿಲ್ಲೆ ಹೊಸೂರು–ಗುಡ್ಡೆಕೇರಿಯ ಟಿ. ವೀರೇಶ,
- ಧಾರವಾಡ ಜಿಲ್ಲೆ ಇಂಗಳಹಳ್ಳಿಯ ಕಳಕ ಮಲ್ಲೇಶ ಪಟ್ಟಣಶೆಟ್ಟಿ,
- ಬೆಂಗಳೂರು ಉತ್ತರ ಜಿಲ್ಲೆಯ ನೆಲಗದರಹಳ್ಳಿಯ ಎಸ್. ಶ್ಯಾಮಲಾ,
- ಉಡುಪಿ ಜಿಲ್ಲೆ ರಂಜಾಳದ ವಿನಾಯಕ ನಾಯ್ಕ,
- ಬೆಂಗಳೂರು ದಕ್ಷಿಣ ಜಿಲ್ಲೆ ಕೋನಪ್ಪನ ಅಗ್ರಹಾರದ ಸಿ. ಪದ್ಮಾವತಿ,
- ವಿಜಯಪುರ ಜಿಲ್ಲೆ ನಾದ ಕೆ.ಡಿ.ಯ ಶಶಿಕಲಾ ಲಕ್ಷ್ಮಣ ಬಡಿಗೇರ,
- ಚಿಕ್ಕಬಳ್ಳಾಪುರ ಜಿಲ್ಲೆ ಹಂಪಸಂದ್ರದ ಹರೀಶ್ ರಾಜ ಅರಸ್,
- ದಕ್ಷಿಣ ಕನ್ನಡದ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ ಕೆ. ವಿಶ್ವನಾಥ ಗೌಡ ಅವರುಗಳು ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.