ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಾಡು, ನುಡಿ, ಮತ್ತು ಭಾಷೆಯ ಬಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಂಡು ಕನ್ನಡ ಬೆಳೆಸುವ ಕಾಯಕವನ್ನು ಕಟ್ಟಿ ಬದ್ದರಾಗಿ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತೋಪಮ್ಮನವರ ದೇವಾಲಯದ ಬಳಿ ಕರ್ನಾಟಕ ಸಂಭ್ರಮ -೫೦ರ ಅಂಗವಾಗಿ ಸಂಚಾರ ಮಾಡುತ್ತಿರುವ ಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಿ ಮಾತನಾಡಿದ ಅವರು ಭಾಷೆ ಮತ್ತು ದೇಶದ ವಿಚಾರ ಬಂದಾಗ ನಾವೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಏಕೀಕರಣಗೊಂಡು ೫೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ಸರ್ವ ವ್ಯಾಪಿ ಮಾಡಿ ಸಂಸತ ಹಂಚಿಕೊಳ್ಳಲು ಸರ್ಕಾರ ರಾಜ್ಯಾಂದ್ಯoತ ಜ್ಯೋತಿ ರಥಯಾತ್ರೆ ಸಂಚಾರ ಮಾಡಿಸುತ್ತಿದ್ದು ಇದು ಅಭಿನಂದನೀಯ ಕೆಲಸ ಎಂದು ತಿಳಿಸಿದರು. ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ನಾವೆಲ್ಲರೂ ಕನ್ನಡಿಗರಾಗಿ ಜನಿಸಿರುವುದು ಪೂರ್ವ ಜನ್ಮದ ಸುಕೃತ ಎಂದು ಬಣಿಸಿದ ಅವರು ಭಾಷೆಯನ್ನು
ಶ್ರೀಮಂತಗೊಳಿಸಲು ಮಹಾನ್ ಕವಿಗಳು, ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಶ್ರಮಿಸಿದ್ದು ನಾವು ಅವರುಗಳ ಹಾದಿಯಲ್ಲಿ ಸಾಗಿಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲ್ಲೆತ್ತರಕ್ಕೆ ಹಾರಿಸೋಣ ಎಂದು ನುಡಿದರು.
ಜ್ಯೋತಿ ರಥಯಾತ್ರೆಗೆ ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಆನಂತರ ಯಾತ್ರೆಯೂ ಹಾಸನ-ಮೈಸೂರು ರಸ್ತೆಯ ಮೂಲಕ ಸಾಗಿ ಗರುಡಗಂಭದ ವೃತ್ತ, ವಿವಿರಸ್ತೆ, ಸಿಎಂ ರಸ್ತೆ, ಭಾರತಿ ವಿದ್ಯಾ ಮಂದಿರ ರಸ್ತೆ, ಬಜಾರ್ ರಸ್ತೆ, ಮೂಲಕ ಸಾಗಿ ಪುರಸಭೆ ವೃತ್ತದಿಂದ ಹಂಪಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮವಾದ ಭೇರ್ಯಕ್ಕೆ ತಲುಪಿತು.
ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶ0ಕರ್, ಕೋಶಾಧ್ಯಕ್ಷ ಜಿ.ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಇಒ ಕುಲದೀಪ್, ಮುಖ್ಯಾಧಿಕಾರಿ ವಿ.ಬಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಮುಖಂಡರಾದ ಚಂದ್ರನಾಯಕ, ಹೊಸಕೋಟೆ ಚೆಲುವರಾಜು, ಮಿರ್ಲೆದೀಪು ಸೇರಿದಂತೆ ಮತ್ತಿತರರು ಹಾಜರಿದ್ದರು.