Monday, April 21, 2025
Google search engine

Homeಸ್ಥಳೀಯಇಂದು ಅರಮನೆ ಆವರಣಕ್ಕೆ ದಸರಾ ಆನೆಗಳ ಆಗಮನ: ಸಚಿವ ಎಚ್.ಸಿ.ಮಹದೇವಪ್ಪ

ಇಂದು ಅರಮನೆ ಆವರಣಕ್ಕೆ ದಸರಾ ಆನೆಗಳ ಆಗಮನ: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: ಮೈಸೂರು ದಸರಾ ಆನೆಗಳ ಎರಡನೇ ತಂಡ ಗುರುವಾರ ಮಧ್ಯಾಹ್ನ ೩ ಗಂಟೆಗೆ ಅರಮನೆ ಆವರಣಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು

ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ, ಹಿರಣ್ಯ ಆನೆಗಳು ಬರಲಿವೆ ಎಂದು ಮಹದೇವಪ್ಪ ಮಾಹಿತಿ ನೀಡಿದರು. ನಾಲ್ಕು ವರ್ಷಗಳಿಂದ ದಸರಾ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯು ನೇತೃತ್ವದಲ್ಲಿ ಧನಂಜಯ, ಗೋಪಿ, ಭೀಮ, ರೋಹಿತ್, ಕಾಂಜನ್, ಚೊಚ್ಚಲ ಏಕಲವ್ಯ; ಆಗಸ್ಟ್ ೨೧ ರಂದು ಗಜಪಯಣ ಕಾರ್ಯಕ್ರಮದ ನಂತರ ವರಲಕ್ಷ್ಮಿ ಮತ್ತು ಲಕ್ಷ್ಮಿ ಎಂಬ ಹೆಣ್ಣು ಆನೆಗಳು ಮೈಸೂರು ನಗರವನ್ನು ತಲುಪಿದವು. ಅವು ದಸರಾ ಮೆರವಣಿಗೆ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾವೆ.

ಪ್ರತಿ ಬಾರಿಯ ದಸರಾ ಮಹೋತ್ಸವದಂತೆ ಈ ಬಾರಿಯೂ ಸಂಜೆ ೪ರಿಂದ ೧೦ರವರೆಗೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಚಿವ ಮಹದೇವಪ್ಪ ತಿಳಿಸಿದರು. ಈ ಮೊದಲು ಸಂಜೆ ೬ ರಿಂದ ರಾತ್ರಿ ೧೦ ರವರೆಗೆ ನಡೆಯುತ್ತಿತ್ತು. ನಾವು ಅವಧಿಯನ್ನು ಕನಿಷ್ಠ ಎರಡು ಗಂಟೆಗಳಿಗೆ ಹೆಚ್ಚಿಸಲು ಯೋಚಿಸಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular