ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಯುವ ವಕೀಲ ಡಿ.ಕೆ.ಕೊಪ್ಪಲು ಕೆ.ಸಿ.ಹರೀಶ್ ಅವರನ್ನು ನೇಮಿಸಲಾಗಿದೆ.
ಹಾಲಿ ಈ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ.ವಿ.ಮಹೇಶ್ ಅವರ ಹುದ್ದೆ ಮುಕ್ತಾಯ ಗೊಂಡಿರುವ ಹಿನ್ನೆಲೆಯಲ್ಲಿ ಕೆ.ಸಿ.ಹರೀಶ್ ಅವರನ್ನು ಮುಂದಿನ ಒಂದು ವರ್ಷ ಇಲ್ಲವೇ ಮುಂದಿನ ಆದೇಶದ ವರಗೆ ನೇಮಿಸಲಾಗಿದೆ.
ಈ ಸಂಬಂಧ ರಾಜ್ಯಪಾಲರ ಅದೇಶಾನುಸಾರ ರಾಜ್ಯ ಸರ್ಕಾರದ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ್ ಅವರು ಕೆ.ಸಿ.ಹರೀಶ್ ಅವರನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ.