Saturday, April 19, 2025
Google search engine

Homeರಾಜ್ಯಸುದ್ದಿಜಾಲಸ್ವಾವಲಂಬನೆ ಬದುಕಿಗೆ ಸ್ವ ಉದ್ಯೋಗ ಪೂರಕ : ನೀಲಿ ಲೋಹಿತ್

ಸ್ವಾವಲಂಬನೆ ಬದುಕಿಗೆ ಸ್ವ ಉದ್ಯೋಗ ಪೂರಕ : ನೀಲಿ ಲೋಹಿತ್

ರಾಮನಗರ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಕರಕುಶಲ ಉದ್ಯಮವು ಪ್ರಮುಖಪಾತ್ರ ವಹಿಸಿಲಾಗಿದೆ ಎಂದು ಮೈಸೂರಿನ ನೀಲಿ ಕಲಾ ಫೌಂಡೇಶನ್,ಸಂಸ್ಥಾಪಕ ಅಧ್ಯಕ್ಷ ನೀಲಿ ಲೋಹಿತ್ ರವರು ತಿಳಿಸಿದರು.

ಅವರು ಸೆ. ೪ ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸಂಜೀವ ರತ್ನ ಮಹಲ್ ಕಾಲೇಜಿನ ಸಭಾಂಗಣದಲ್ಲಿ ಮಣ್ಣಿನ ಆಭರಣಗಳತಯಾರಿಕಾ ಪ್ರಮಾಣ ಪತ್ರ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸ್ವ ಉದ್ಯೋಗಕ್ಕೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ ಬದಲಾಗಿ ಸೂಕ್ಷ್ಮತೆ ಮತ್ತು ಕ್ರಿಯಾಶೀಲತೆ ಹೊಂದಿದ್ದರೆ ಮಣ್ಣಿನ ಆಭರಣ ತಯಾರಿಕೆಯನ್ನು ಜೀವನ ನಿರ್ವಹಣೆಗೆ ಬಳಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಉಷಾಮಾಲಿನಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸ್ವ ಉದ್ಯೋಗವನ್ನು ಮೈಗೂಡಿಸಿಕೊಂಡರೆ ಸ್ವಾವಲಂಬಿಗಳಾಗಿ ಬದುಕಬಹುದು ಹಾಗೂ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಬೋರೇಗೌಡ ಎಸ್ ಬಿ ಹಾಗೂ ನಂಜುಂಡ ಆರ್ ರವರನ್ನು ಅಭಿನಂದಿಸಿದರು. ಇಂತಹ ಉತ್ತಮ ಕಾರ್ಯಗಳು ಕಾಲೇಜಿನಲ್ಲಿ ಜರಗುವುದು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಉತ್ತಮ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರುಗಳಾದ ಐಕ್ಯೂಎಸಿ ಸಂಚಾಲಕ ರಾದ ಡಾ. ಮುಜಾಹಿದ್ ಖಾನ್ ಎಸ್, ಡಾ. ಪ್ರಭು ಉಪಾಸೇ, ಡಾ. ಜಗದೀಶ್ ನಡೆವಿನ ಮಠ, ಆನಂದ್ ಕೆ ಡಿ, ಶ್ರೀಕಾಂತ್ ಎನ್, ಡಾ. ಶೈಲಜಾ, ವಾಣಿ ವೈ ಡಿ, ವೀಣಾ, ರೀಮಾ, ಡಾ. ಚೆನ್ನಮ್ಮ, ಡಾ. ಅನುರಾಧ, ಡಾ. ಅನುಪಮಾ, ಚಂದ್ರಕಲಾ, ಗೆಜಿಟೆಡ್ ಮ್ಯಾನೇಜರ್ ಧನಂಜಯ, ಲೀಲಾ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular