ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಮ್ಮ ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಊರುಗಳಿಂದ ಬಂದು ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ವಲಸೆ ಕಾರ್ಮಿಕರಿಗೆ ಹುಣಸೂರಿನ ಜನಧ್ವನಿ ಫೌಂಡೇಶನ್ ವತಿಯಿಂದ ಬಾಗಿನ ರೂಪದಲ್ಲಿ ಸೀರೆ ಬಳೆ ಹೂ ಕುಂಕುಮ ನೀಡುವ ಮೂಲಕ ಗೌರಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಕೆ.ಆರ್.ನಗರ ತಾಲೂಕಿನ ದೊಡ್ಡೆಕೊಪ್ಪಲು ಮತ್ತು ಹಣಸೂರು ತಾಲೂಕಿನ ಬಿಳಿಕೆರೆ ಸೇರಿ ವಿವಿಧ ಕಡೆ ಕಬ್ಬು ಕಟಾವು ಮಾಡುವ ಮತ್ತು ಕಬ್ಬಿಣದ ರೈತ ಉಪಯೋಗಿ ಸಾಮಾಗ್ರಿ ತಯಾರಿಸುವ ಮಹಿಳೆಯರಿಗೆ ಬಾಗಿನ ಅರ್ಪಿಸಿಲಾಯಿತು.
ಇದೇ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷರು ಹಾಗೂ ವಕೀಲರಾದ ಆಯರಹಳ್ಳಿ ಪ್ರವೀಣ್ ಅವರು ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದ್ದು ಈ ಹಬ್ಬದಂದು ಅವರು ತವರು ಮನೆಯಲ್ಲಿ ಭಾಗಿನ ಪಡೆಯುವುದು ಪ್ರತೀತಿ. ಇವರು ತಮ್ಮ ಜೀವನ ನಿರ್ವಹಣೆಗಾಗಿ ಊರಿಂದ ಊರಿಗೆ ವಲಸೆ ಹೋಗಿ ಕೆಲಸ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಇವರಿಗೆ ತಮ್ಮ ಊರು ಹಾಗೂ ತಮ್ಮ ತವರು ನೆನಪಾಗುವುದು ಸಹಜ ಆದ್ದರಿಂದ ಇಂದು ನಮ್ಮ ಜನಧ್ವನಿ ಫೌಂಡೇಶನ್ ವತಿಯಿಂದ ಇವರಿಗೆ ಭಾಗಿನ ನೀಡುವ ಮೂಲಕ ಗೌರಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಫೌಂಡೇಶನ್ ನ ಕಾರ್ಯದರ್ಶಿ ಸುನೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.