ಬೆಂಗಳೂರು : ಸ್ಯಾಂಡಲ್‌ವುಡ್ ನಿರ್ದೇಶಕ ನಾಗಶೇಖರ್ ಕಾರು ಅಪಘಾತವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದ್ರೆ, ಈ ಅಪಘಾತದಲ್ಲಿ ಓರ್ವ ಮಹಿಳೆಗೆ ಗಾಯವಾಗಿದೆ.
ಇಂದು ಶುಕ್ರವಾರ ಮಧ್ಯಾಹ್ನ ೧:೩೦ರ ಸುಮಾರಿಗೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಿರ್ದೇಶಕ ನಾಗಶೇಖರ್ ಬೆಂಜ್ ಕಾರು ಡ್ರೈವ್ ಮಾಡಿಕೊಂಡು ಬರುವಾಗ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ, ಓರ್ವ ಮಹಿಳೆಗೆ ಗಾಯವಾಗಿದೆ.
ಅಪಘಾತದ ಬಳಿಕ ಮಹಿಳೆಯನ್ನ ಆಸ್ಪತ್ರೆ ದಾಖಲಿಸಿಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಇನ್ನು ನಿರ್ದೇಶಕ ನಾಗಶೇಖರ್ ಅವ್ರ ಚೆಂಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ.