‘ದೃಷ್ಟಿಬೊಟ್ಟು’ ಸೀರಿಯಲ್ನಲ್ಲಿ ವಿಜಯ್ ಸೂರ್ಯ, ಅರ್ಪಿತಾ ಮೋಹಿತೆ, ಅಂಬಿಕಾ ಮುಂತಾದವರು ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಮಾತ್ರವಲ್ಲದೇ ‘ಜಿಯೋ ಸಿನಿಮಾ’ ಆ್ಯಪ್ ಮೂಲಕವೂ ಈ ಧಾರಾವಾಹಿಯನ್ನು ವೀಕ್ಷಿಸಬಹುದು. ಇತ್ತೀಚೆಗೆ ಧಾರಾವಾಹಿ ತಂಡದವರು ಸುದ್ದಿಗೋಷ್ಠಿ ನಡೆಸಿದರು.
‘ಕಲರ್ಸ್ ಕನ್ನಡ’ ಚಾನೆಲ್ನಲ್ಲಿ ಹೊಸ ಧಾರಾವಾಹಿಯ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ರೂಪವೇ ಶಾಪವಾದ ಹುಡುಗಿಯ ಕಹಾನಿ ಈ ಸೀರಿಯಲ್ನಲ್ಲಿ ಇರಲಿದೆ. ಈ ಹೊಸ ಸೀರಿಯಲ್ ಹೆಸರು ‘ದೃಷ್ಟಿಬೊಟ್ಟು’. ಸೆ.9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರ ಆಗಲಿದೆ. ವಿಜಯ್ ಸೂರ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
‘ದೃಷ್ಟಿಬೊಟ್ಟು’ ಸೀರಿಯಲ್ನ ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಅಂಬಿಕಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಮುಂತಾದವರು ಈ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ‘ಈ ಸೀರಿಯಲ್ನ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನ ಗೆಲ್ಲುತ್ತದೆ’ ಎಂದು ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದಾರೆ.
ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಚಿತ್ರೀಕರಣ ಮಾಡಿರುವುದು ಹೆಗ್ಗಳಿಕೆ. ಸ್ಪರ್ಶ್ ಮಸಾಲಾ ಈ ಧಾರಾವಾಹಿಯ ಸ್ಪೆಷಲ್ ಪಾರ್ಟ್ನರ್ ಆಗಿದ್ದಾರೆ. 2 ವಿಭಿನ್ನ ಕೌಟುಂಬಿಕ ಹಿನ್ನೆಲೆಯಿಂದ ಬಂದ ದೃಷ್ಟಿ ಎಂಬ ಹುಡುಗಿ ಮತ್ತು ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಒಂದೆಡೆ ಸಂಧಿಸಿದಾಗ ನಡೆಯುವ ಕೌತುಕದ ಕಥೆ ಈ ಸೀರಿಯಲ್ನಲ್ಲಿ ಇದೆ.
ದೃಷ್ಟಿಯ ಪಾಲಿಗೆ ರೂಪ ಎನ್ನುವುದೇ ಶಾಪವಾಗಿರುತ್ತದೆ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುವ ಅವಳಿಗೆ ತನ್ನ ಸೋದರಿಯನ್ನು ಮತ್ತೆ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಆಸೆ. ಮೊದಲು ಮೆಕ್ಯಾನಿಕ್ ಆಗಿ ಈಗ ರೌಡಿಯಾಗಿರುವ ಹೀರೋ ದತ್ತನಿಗೆ ಸುಂದರವಾದ ಹೆಣ್ಣುಗಳನ್ನ ಕಂಡರೆ ಕೋಪ. ಇಂಥ ಡಿಫರೆಂಟ್ ಆದ ಕಥಾಹಂದರದಲ್ಲಿ ಈ ಸೀರಿಯಲ್ ಮೂಡಿಬರಲಿದೆ.
ಕಥೆಯು ಹಲವು ಊಹಿಸಲಾಗದ ಟ್ವಿಸ್ಟ್ಗಳನ್ನು ಪಡೆಯುತ್ತಾ ಸಾಗುತ್ತದೆ. ದೃಷ್ಟಿಗೆ ತನ್ನ ಸಹೋದರಿ ಸಿಕ್ಕುತ್ತಾಳಾ? ದತ್ತ ಮತ್ತು ದೃಷ್ಟಿಯನ್ನು ವಿಧಿ ಒಂದಾಗಿಸುತ್ತಾ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಲು ಸಾಧ್ಯವಾಗುತ್ತಾ? ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ವೀಕ್ಷಿಸಬೇಕು.