Sunday, April 20, 2025
Google search engine

Homeಸಿನಿಮಾಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಸಮಿತಿ ರೀತಿ ವರದಿ ಬೇಕು: ರಕ್ಷಿತ್‌ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಸಮಿತಿ ರೀತಿ ವರದಿ ಬೇಕು: ರಕ್ಷಿತ್‌ ಶೆಟ್ಟಿ

ಚಿತ್ರರಂಗದಲ್ಲಿ ಮಹಿಳೆಯ ಮೇಲಾಗುವ ದೌರ್ಜನ್ಯ ತಡೆಯಲು ಸಮಿತಿ ರಚನೆಯಾಗಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿರುವ ಬಗ್ಗೆ ರಕ್ಷಿತ್ ಶೆಟ್ಟಿ ರಿಯಾಕ್ಷ್ ಮಾಡಿದ್ದಾರೆ. ಕನ್ನಡದಲ್ಲೂ ಕೇರಳದ ಹೇಮಾ ಸಮಿತಿ ರೀತಿ ವರದಿ ಬೇಕು ಎಂದು ನಟ ಮಾತನಾಡಿದ್ದಾರೆ.

ಹೇಮಾ ಸಮಿತಿ ರೀತಿ ನಮ್ಮಲ್ಲೂ ಒಂದು ಕಮಿಟಿ ರಚನೆ ಆಗಬೇಕು ಎಂಬುದು ಒಳ್ಳೆಯ ಉದ್ದೇಶ. ನಾವು ಕೂಡ ಅದಕ್ಕೆ ಸಹಿ ಹಾಕುತ್ತೇವೆ. ಸಹಿ ಹಾಕಿದ ಮೇಲೆ ನಾನು ಮತ್ತೆ ಗುಹೆಯಲ್ಲಿ ಹೋಗಿ ಕುಳಿತುಕೊಂಡು ಸಿನಿಮಾ ಮಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಒಮ್ಮೆ ಸಹಿ ಮಾಡಿದ ಮೇಲೆ ಅದರ ಹಿಂದಿರುವ ಕೆಲಸವನ್ನು ಕೂಡ ನಾನು ಮಾಡಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಅಂದಹಾಗೆ, ಸೆ.5ರಂದು ನಟ ಚೇತನ್ ನೇತೃತ್ವದಲ್ಲಿ ‘ಫೈರ್ ಸಂಸ್ಥೆ’ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಕಮಿಟಿಯಂತೆ ಸಮಿತಿ ರಚಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಚೇತನ್ ಜೊತೆ ಶೃತಿ ಹರಿಹರನ್, ನೀತು ಶೆಟ್ಟಿ ಸಾಥ್ ನೀಡಿದರು. ಈ ಮನವಿ ಪತ್ರಕ್ಕೆ ಸುದೀಪ್, ಆಶಿಕಾ ರಂಗನಾಥ್, ಮಾನ್ವಿತಾ ಕಾಮತ್ ಸೇರಿದಂತೆ 153 ಮಂದಿ ಸಹಿ ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular