ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪೊಲೀಸರು ನ್ಯಾಯಾಲಯಕ್ಕೆ ಸುಮಾರು ೩೯೯೧ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದರು. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ೨೪ನೇ ಎಸಿಎಂಎಂ ನ್ಯಾಯಾಲಯವು ಆರೋಪ ಪಟ್ಟಿ ಪರಿಶೀಲನೆ ಪೂರ್ಣಗೊಳಿಸಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿ ಪರಿಶೀಲನೆ ಪೂರ್ಣ ವಾಗಿದ್ದು, ಕ್ರೈಂ ನಂಬರ್‌ನಿಂದ ಸಿಸಿ ನಂಬರ್ ಗೆ ಕೇಸ್ ಬದಲಾವಣೆ ಮಾಡಲಾಗಿದೆ. ಸಿಸಿ ನಂಬರ್ ೨೮೭೭೭/೨೦೨೪ ಎಂದು ೨೪ನೇ ಎಸಿಎಂಎಂ ಕೋರ್ಟ್ ದಾಖಲಿಸಿದೆ.
ಸೆಪ್ಟೆಂಬರ್ ೯ ರಂದು ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಅಂದು ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಲಿರುವ ಕೋರ್ಟ್, ವಿಡಿಯೋ ಕಾನ್ಫರೆನ್ಸ್ ಮೂಲಕ ಅಂದು ಆರೋಪಿಗಳ ವಿಚಾರಣೆ ನಡೆಯಲಿದೆ. ಅಂದೆ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿ ಸಲ್ಲಿಸಲಾಗುತ್ತದೆ.
ಕಳೆದ ಎರಡು ದಿನಗಳ ಹಿಂದೆ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಸುಮಾರು ೩೯೯೧ ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅದಾದ ಬಳಿಕ ಡಿ ಗ್ಯಾಂಗ್ ರೇಣುಕಾಸ್ವಾಮಿಯನ್ನ ಯಾವ ರೀತಿ ಕ್ರೂರವಾಗಿ ಕೊಲೆ ಮಾಡಿರುವ ಹಲವು ಚಿತ್ರಗಳು ವೈರಲ್ ಆಗಿದ್ದವು. ರೇಣುಕಾಸ್ವಾಮಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ದೃಶ್ಯವಂತೂ ಕರಳು ಕಿತ್ತುಬರುವಂತಿತ್ತು. ಪ್ರಜ್ಞೆ ತಪ್ಪಿ ಬಿದ್ದಿರುವ ಫೋಟೋ ವೈರಲ್ ಆಗಿತ್ತು.