Saturday, April 19, 2025
Google search engine

Homeರಾಜ್ಯಸುದ್ದಿಜಾಲಮಾಂಸ ಮಾರಾಟ ಹೋಟೆಲ್ ಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳ ಮುಖಂಡರಿಂದ ದೂರು

ಮಾಂಸ ಮಾರಾಟ ಹೋಟೆಲ್ ಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳ ಮುಖಂಡರಿಂದ ದೂರು

ಕನಕಪುರ: ಇಲ್ಲಿನ ಎಂಜಿ ರಸ್ತೆಯ ಬಸವೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತ ಜಾಗದಲ್ಲಿ ಮಾಂಸ ಮಾರಾಟದ ಹೋಟೆಲ್ ತೆಗೆಯುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳ ಮುಖಂಡರು ನಗರಸಭೆ ಮತ್ತು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದರು.

ಹಿಂದೂ ಪವಿತ್ರವಾದ ಹಾಗೂ ಶುದ್ಧವಾದ ದೇವಾಲಯಗಳ ಪಕ್ಕದಲ್ಲಿ ಮಾಂಸ ಮಾರಾಟ ಮಾಡುವುದು ನಿಷೇಧವಾಗಿದೆ, ಆದರೆ ಬಸವೇಶ್ವರ ದೇವಸ್ಥಾನ ಪಕ್ಕದಲ್ಲಿ ಕೇರಳದ ಮುಸ್ಲಿಂ ತಾಹಿರ್ ಎಂಬ ವ್ಯಕ್ತಿ ಮಾಂಸಹಾರದ ಹೋಟೆಲ್ ತೆರೆಯಲು ಮುಂದಾಗಿದ್ದಾರೆ.

ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ, ಮತ್ತು ಪವಿತ್ರವಾದ ದೇವಾಲಯ ಆವರಣವು ಅಶುದ್ಧವಾಗುತ್ತದೆ, ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಮಾಂಸ ಮಾರಾಟದ ಹೋಟೆಲ್ ತೆರೆಯದಂತೆ ಕ್ರಮ ವಹಿಸಬೇಕೆಂದು ಮುಖಂಡರು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular