Saturday, April 19, 2025
Google search engine

Homeರಾಜ್ಯಸುದ್ದಿಜಾಲವಾಣಿಜ್ಯ ಮಳಿಗೆ ಹರಾಜು ವಿಚಾರ: ಶಾಸಕರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ: ಹೆಚ್.ವಿಶ್ವನಾಥ್

ವಾಣಿಜ್ಯ ಮಳಿಗೆ ಹರಾಜು ವಿಚಾರ: ಶಾಸಕರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ: ಹೆಚ್.ವಿಶ್ವನಾಥ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ ೭೨ ವಾಣಿಜ್ಯ ಮಳಿಗೆಗಳನ್ನು ಹರಾಜಾಗಿದ್ದರೂ ಅವುಗಳನ್ನು ನಿಯಮಾನುಸಾರ ಬಾಡಿಗೆದಾರರಿಗೆ ನೀಡದೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು ಕೂಡಲೇ ಈ ಸಂಬoಧ ಶಾಸಕ ಡಿ.ರವಿಶಂಕರ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಮಳಿಗೆಗಳು ಬಾಗಿಲು ಹಾಕಿರುವುದರಿಂದ ಅಲ್ಲಿ ವ್ಯಾಪಾರ ಮಾಡುತ್ತಿದವರ ಬದುಕು ಬೀದಿಗೆ ಬಿದ್ದಿದ್ದು ಇದರ ಜತೆಗೆ ಪಟ್ಟಣದಲ್ಲಿ ವ್ಯವಹಾರ ಕುಂಠಿತವಾಗಿದ್ದು ವಿಚಾರವನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ ಪುರಸಭೆಯ ಚುನಾಯಿತ ಸದಸ್ಯರು ಮತ್ತು ಜಿಲ್ಲಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ಜತೆ ಸಭೆ ನಡೆಸಬೇಕು ಎಂದು ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ನಾನು ರಾಜಕೀಯ ಕಾರಣಕ್ಕೆ ಈ ವಿಚಾರವನ್ನು ಮಾತನಾಡುತ್ತಿಲ್ಲ ನಮ್ಮೂರಿನ ವ್ಯಾಪಾರಿಗಳಿಗೆ ಮತ್ತು ಜನರಿಗೆ ತೊಂದರೆಯಾದಾಗ ಜವಬ್ದಾರಿಯುತ ವ್ಯಕ್ತಿಯಾಗಿ ಈ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ ಒಂದು ವೇಳೆ ನೀವು ಈ ಕೆಲಸವನ್ನು ತ್ವರಿತವಾಗಿ ಮಾಡದಿದ್ದರೆ ವ್ಯಾಪಾರಿಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಮಳಿಗೆ ವಿಚಾರವನ್ನು ಪರಿಹರಿಸಲು ಮುಂದಾಗುತ್ತೇನೆ ಎಂದು ನುಡಿದರು.

ಮುಚ್ಚಿರುವ ಮಳಿಗೆಗಳನ್ನು ಬಾಗಿಲು ತೆರೆಯಿಸಿ ಹರಾಜಿನಲ್ಲಿ ಪಾಲ್ಗೊಂಡು ಬಾಡಿಗೆ ಪಡೆದಿರುವವರಿಗೆ ನಿಯಮಾನುಸಾರ ಕೊಡಿಸಲು ಸರ್ವ ಪಕ್ಷದ ಮುಖಂಡರು ಮತ್ತು ಚುನಾಯಿತ ಸಭೆ ನಡೆಸಿದರೆ ನಾನು ಸಹ ಭಾಗವಹಿಸಿ ಸಲಹೆ ಸೂಚನೆ ನೀಡಲಿದ್ದು ಪಟ್ಟಣದ ಜನರ ಹಿತದೃಷ್ಟಿಯಿಂದ ಈ ಕೆಲಸವನ್ನು ಶಾಸಕರು ಮಾಡಬೇಕೆಂದು ತಿಳಿಸಿದರು.

ಮಳಿಗೆಗಳು ಬಾಗಿಲು ಮುಚ್ಚಿರುವುದರಿಂದ ವ್ಯಾಪರಿಗಳಿಗೆ ತೊಂದರೆಯಾಗುವುದರ ಜತೆಗೆ ಪುರಸಭೆಗೂ ಕೋಟ್ಯಾಂತರ ರೂ ಆದಾಯ ನಷ್ಟವಾಗಿದ್ದು, ಇವೆಲ್ಲವನ್ನು ಜವಬ್ದಾರಿಯುತ ಸ್ಥಾನದಲ್ಲಿರುವ ನಾವುಗಳು ಅರಿತುಕೊಂಡು ಸಕಾಲದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರು, ಪುರಸಭೆ ಚುನಾಯಿತ ಸದಸ್ಯರುಗಳು ಮತ್ತು ಅಧಿಕಾರಿಗಳು ವಾಣಿಜ್ಯ ಮಳಿಗೆ ಹರಾಜು ವಿಚಾರಕ್ಕೂ ತಮಗೂ ಸಂಬoಧವಿಲ್ಲವೆoಬoತೆ ವರ್ತಿಸುತಿದ್ದು ಇದು ಇವರಿಗೆ ಶೋಭೆ ತರುವುದಿಲ್ಲ ಜನರು ನಮಗೆ ನೀಡಿರುವ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸದಿದ್ದರೆ ಅವರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ಗರುಡಗಂಭ ವೃತ್ತದ ಬಳಿ ನಾಲ್ಕು ಮಳಿಗೆಗಳು ಶಿಥಿಲಗೊಂಡು ಮುಂಭಾಗ ಪೂರ್ಣ ಕುಸಿದು ಹೋಗಿವೆ ಆದರೆ ಅವಶೇಷಗಳನ್ನು ತೆಗೆಯುವ ಕೆಲಸವನ್ನು ಪುರಸಭೆಯವರು ಮಾಡುತ್ತಿಲ್ಲ ಇಷ್ಟು ಬೇಜವಬ್ದಾರಿ ವಹಿಸಿದರೆ ಹೇಗೆಂದು ಪ್ರಶ್ನಿಸಿದ ಅವರು ಕೂಡಲೇ ಅದನ್ನು ತೆರವುಗೊಳಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ಮಳಿಗೆ ಬಾಡಿಗೆದಾರರಾದ ಮಹದೇವ್, ಗಂಗರಾಜು, ಉಮೇಶ್, ಶಿವಾಜಿಗಣೇಶನ್ ಇದ್ದರು.

RELATED ARTICLES
- Advertisment -
Google search engine

Most Popular