ರಾಮನಗರ : ರಾಮನಗರದ ಚಾಮುಂಡಿಪುರ ಲೇಔಟ್ ನಲ್ಲಿ ೭ ವರ್ಷದ ಬಾಲಕಿಯನ್ನು ಕಿಡ್ನಾಪ್ ಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಎಂಬಾತ ೭ ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಬಾಲಕಿಯ ಕೈ, ಬಾಯಿಗೆ ಟೇಪ್ ಕಟ್ಟಿ ಕಿಡ್ನಾಪ್ ಮಾಡಲು ಯತ್ನಿಸಿದ್ದ. ಮಗಳು ಕಾಣುತ್ತಿಲ್ಲ ಎಂದು ತಂದೆ ಸಂತೋಷ್ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯರು ಗಣೇಶ ಮೂರ್ತಿ ಕೂರಿಸಿದ್ದ ಜಾಗದಲ್ಲಿ ಇದ್ದಾಳೆ ಎಂದು ಹೇಳಿದ್ದರು. ಆದರೆ ಅಲ್ಲಿ ಬಂದು ನೋಡಿದರೆ ಬಾಲಕಿ ಇರಲಿಲ್ಲ. ತಕ್ಷಣ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಬಳಿಕ ಯುವಕರ ಹುಡುಕುತ್ತಿರುವುದನ್ನು ಕಂಡು ಆರೋಪಿ ದರ್ಶನ್ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.