ಮಂಡ್ಯ: ವರ್ಗಾವಣೆಗೊಂಡ ಶಿಕ್ಷಕನಿಗೆ ಶಾಲೆಯ ವಿದ್ಯಾರ್ಥಿಗಳು ಗೌರವ ಪೂರ್ವಕ ಬಿಳ್ಕೊಡುಗೆ ನೀಡಿದ್ದಾರೆ. ನಾಗಮಂಗಲ ತಾಲೂಕಿನ ಪಡೀಗೌಡನಕೊಪ್ಪಲು ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ಕಾಂತರಾಜು ವರ್ಗಾವಣೆಗೊಂಡಿದ್ದು, ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಿ ಶಿಕ್ಷಕರ ಮೇಲೆ ಪುಷ್ಪವೃಷ್ಟಿಗೈದು ವಿದ್ಯಾರ್ಥಿಗಳು ಕಾಣಿಕೆ ನೀಡಿ ಸನ್ಮಾನಿಸಿದ್ದಾರೆ. ವರ್ಗಾವಣೆಗೊಂಡ ಶಿಕ್ಷಕ ಶಾಲೆಯಿಂದ ಹೊರಡುವ ವೇಳೆ ಹಿರಿಯ ಹಾಗೂ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟು ಬಿಳ್ಕೊಟ್ಟಿದ್ದಾರೆ.