Saturday, April 19, 2025
Google search engine

Homeಸ್ಥಳೀಯಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಐದು ವರ್ಷ ಇದ್ದರೂ ಕಲೆಯನ್ನು ಬಿಡದೆ ಪೋಷಿಸುತ್ತಿರುವ ಸೋಬಾನೆ ಕಲಾವಿದೆ ಚನ್ನಾಜಮ್ಮ

ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಐದು ವರ್ಷ ಇದ್ದರೂ ಕಲೆಯನ್ನು ಬಿಡದೆ ಪೋಷಿಸುತ್ತಿರುವ ಸೋಬಾನೆ ಕಲಾವಿದೆ ಚನ್ನಾಜಮ್ಮ

ಮೈಸೂರು: ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ-೯೮ರ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಯಾಚೇನಹಳ್ಳಿಯ ಸೋಬಾನೆ ಕಲಾವಿದೆ ಚನ್ನಾಜಮ್ಮ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ ಬೋರಲಿಂಗಯ್ಯ ವಹಿಸಿದ್ದರು.

ಪ್ರತೀ ಊರಲ್ಲೂ ಈ ಬಗೆಯ ಸಾವಿರಾರು ಕಲಾವಿದರು ಇದ್ದಾರೆ. ಇವರ ಜೀವನ-ಸಾಧನೆಗಳನ್ನು ಸಂಗ್ರಹಿಸಿ ದಾಖಲೀಕರಿಸುವ ಕೆಲಸವನ್ನು ಪರಿಷತ್ತು ಜಿಲ್ಲಾವಾರು ಮಾಡುತ್ತಿದೆ. ಇದರಿಂದ ಕಲಾವಿದರ ಚರಿತ್ರೆಯನ್ನು ಕಟ್ಟುವ ಕೆಲಸ ಮಾಡಿದಂತಾಗುತ್ತದೆ. ಜನಪದ ಕಲಾವಿದರ ವಿಶ್ವಕೋಶವನ್ನು ಜಾನಪದ ವಿಶ್ವವಿದ್ಯಾಲಯದ ಜೊತೆ ಪರಿಷತ್ತು ಮಾಡಲು ಚಿಂತನೆ ನಡೆಸಿದೆ. ಇದರಿಂದ ಜನಪದರ ಕಲೆ, ಕಲೆಯ ವೈವಿಧ್ಯ, ಅಪರೂಪದ ಕಲೆಗಳನ್ನು ದಾಖಲಿಸುವ ಕೆಲಸ ಆಗುತ್ತದೆ ಎಂದರು. ನಾವು ಆಳುವ ಚರಿತ್ರೆಯನ್ನು ಓದುತ್ತಿದ್ದೇವೆ.

ಆದರೆ ಜನಸಾಮಾನ್ಯರ, ಕಲಾವಿದರ, ಬಡವರ ಚರಿತ್ರೆ ಬರೆಯಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಕೃತಿ ಚಿಂತಕರು ಮತ್ತು ಬರಹಗಾರರೂ ಅದ ಶ್ರೀಧರ ಅಗಲಾಯ ಮಾನತಾಡಿ ನಾನು ಚಿಂತನೆಗಿಂತ ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ವಿಶ್ವ ಮಟ್ಟದಲ್ಲಿ ಹೇಗೆ ಜಾನಪದವನ್ನು ಪ್ರಚಾರ ಮಾಡಬೇಕು ಎನ್ನುವುದನ್ನು ಅರಿಯಬೇಕು ಎಂದರು. ಸಾಹಿತಿ ವಿಜಯ ರಾಂಪುರ ಜನಪದರ ಜ್ಞಾನ ಅಪಾರವಾದದ್ದು, ನಾಡಿಗೆ ಬರ ಬಂದರೂ ಕಲೆಗೆ ಎಂದಿಗೂ ಬರ ಬಂದಿಲ್ಲ ಎಂದರು.


ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಸೋಬಾನೆ ಕಲಾವಿದೆ ಶ್ರೀಮತಿ ಚನ್ನಾಜಮ್ಮ ಕಲಿಕೆಯ ಆಸಕ್ತಿಯಿಂದ ಎಳೆಯ ವಯಸ್ಸಿನಲ್ಲೆ ಊರಿನ ಹಿರಿಯರ ಜೊತೆ ನಾಟಿ ಹಾಕುವಾಗ, ರಾಗಿ ಬೀಸುವಾಗ, ಮದುವೆ ಸಮಾರಂಭಗಳಲ್ಲಿ ಕೇಳಿಸಿಕೊಂಡು ಕುಂತಾಗ, ನಿಂತಾಗ, ಗುನುಗುತ್ತಾ ಹಾಡುಗಳನ್ನು ಕೇಳುತ್ತಾ ಕಲಿತೆ, ಇಂದು ಜಾನಪದ ಲೋಕದಲ್ಲಿ ಗೌರವ ಸ್ವೀಕರಿಸಿ ಸಂತೋಷವಾಗಿದೆ. ಕಲೆ ಉಳಿವಿಗೆ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಕಲೆಯನ್ನು ಕಲಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ತಮ್ಮ ಕಂಚಿನ ಕಂಠದಿಂದ ಬೈರವೇಶ್ವರ, ಮಾದೇಶ್ವರನ ಕುರಿತ ಗೀತೆಗಳನ್ನು ಹಾಗೂ ದಾರೆ ಎರೆಯುವ ಪದ, ಜರಿಯೋ ಪದ, ಅಣ್ಣ ತಂಗಿಯರ ಮೇಲಿನ ಪದಗಳನ್ನು ಹಾಡಿದರು, ತಮ್ಮ ತಂಡದ ಹಾಡುಗಾರ್ತಿಯರಾದ ರಾಜಮ್ಮ, ನಿಂಗಮ್ಮ, ಮಂಚಮ್ಮ, ರಾಜಮ್ಮ ದನಿ ಗೂಡಿಸಿದರು. ಕ್ಯೂರೇಟರ್ ಡಾ. ರವಿ ಯು.ಎಂ ನಿರೂಪಿಸಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಸಂಶೋಧನಾ ಸಂಚಾಲಕ ಡಾ. ಸಂದೀಪ್ ಕೆ.ಎಸ್ ಸ್ವಾಗತಿಸಿದರು. ಯುವ ಚಿಂತಕ ಅಬ್ಬೂರು ಶ್ರೀನಿವಾಸ್, ಜಾನಪದ ಲೋಕದ ಸಿಬ್ಬಂದಿಗಳು, ಡಿಪ್ಲೊಮೊ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular