ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಡಿ.ಹಲಸಹಳ್ಳಿ ಗ್ರಾಮದಲ್ಲಿ 14ನೇ ವರ್ಷದ ಗಣೇಶೋತ್ಸವವನ್ನು ಗವಿಮಠದ ಪರಮ ಪೂಜ್ಯ ಶ್ರೀ ಷಡಕ್ಷರಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಆಚರಣೆ ಮಾಡಲಾಯಿತು.
SSLCಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸುವುದರ ಜೊತೆಗೆ ಬೆನಕ ಬಾಯ್ಸ್ ತಂಡದಿಂದ ಕನ್ನಡಮಯವಾಗಿ ಅದ್ದೂರಿ ಗಣೇಶೋತ್ಸವ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ಗಣೇಶ ಹಬ್ಬದಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ತತ್ವಜ್ಞಾನಿ ಬಸವಣ್ಣ, ಯುಗದ ಕವಿ ಕುವೆಂಪುರವರ ವಿಚಾರಗಳು ಕಂಡುಬಂದದ್ದು ವಿಶೇಷವಾಗಿತ್ತು. ಇದೇ ವೇಳೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನಸೆಳೆದರು. ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮದ ಯುವಕರು ಸನ್ಮಾನಿಸಿದರು.