Sunday, April 20, 2025
Google search engine

Homeಸ್ಥಳೀಯಹುಣಸೂರು: ಕೊಳವಿಗೆ ಗ್ರಾಮದ ಸುತ್ತಲು ಹುಲಿ ಸಂಚಾರ- ಆತಂಕಗೊಂಡ ಜನತೆ

ಹುಣಸೂರು: ಕೊಳವಿಗೆ ಗ್ರಾಮದ ಸುತ್ತಲು ಹುಲಿ ಸಂಚಾರ- ಆತಂಕಗೊಂಡ ಜನತೆ

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಕೊಳವಿಗೆ ಗ್ರಾಮದ ಸುತ್ತಲು ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ನಾಗರಹೊಳೆ ಅರಣ್ಯದಂಚಿನಲ್ಲಿರುವ ಕೊಳವಿಗೆ ಗ್ರಾಮದ ಮುಸುಕಿನ ಜೋಳದ  ಹೊಲದಲ್ಲಿ ಮಂಗಳವಾರ ರಾತ್ರಿ ಹುಲಿ ಹೆಜ್ಜೆ ಗುರುತುಗಳು ಮೂಡಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಅರಣ್ಯದಂಚಿನ ಹೊಲಗಳಿಗೆ ರೈತರು ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಇಲಾಖೆ ಅಧಿಕಾರಿಗಳು ಈವರೆಗೂ ಬಂದಿಲ್ಲ ಎಂದು ಸ್ಥಳೀಯರು ಹೇಳಿದರು.

ಕಳೆದ ವರ್ಷ ಕೊಳವಿಗೆ ಹಾಡಿಯಲ್ಲಿ ಹುಲಿ ದಾಳಿಗೆ ಗಿರಿಜನ ಯುವಕನೊಬ್ಬ ಮೃತಪಟ್ಟಿದ್ದ. ಇಲಾಖೆ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಬೇಕು  ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular