ಮಂಡ್ಯ: ಏಕಾಏಕಿ ಮರ ಉರುಳಿಬಿದ್ದ ಪರಿಣಾಮ ಬೈಕ್, ಕಾರು ಆಟೋ ಜಖಂಗೊಂಡಿರುವ ಘಟನೆ ಮಂಡ್ಯ ನಗರದ ಚೆಸ್ಕಾಂ ಕಛೇರಿ ಮುಂದೆ ನಡೆದಿದೆ.
ಗಣಪನ ಅನ್ನ ಸಂತರ್ಪಣೆಯ ಪ್ರಸಾದಕ್ಕೆ ಜನರು ಅತ್ತ ಹೋಗುತ್ತಿದ್ದಂತೆ ಬುಡ ಸಮೇತ ಮರ ಉರುಳಿ ಬಿದ್ದಿದೆ. ಗಣಪನ ಪ್ರಸಾದದಿಂದ ಭಾರಿ ಅನಾಹುತ ಒಂದು ತಪ್ಪಿದೆ. ಐದು ನಿಮಿಷ ಮುಂಚೆ ಮರ ಉರುಳಿ ಬಿದ್ದಿದ್ರೆ ಹೆಚ್ಚಿನ ಪ್ರಾಣಾಪಾಯವಾಗುತ್ತಿತ್ತು. ಅನ್ನಸಂತಪರ್ಣೆಗೆಂದು ಊಟಕ್ಕೆ ಜನರು ತೆರಳುತ್ತಿದ್ದ ವೇಳೆ ಮರ ಕೆಳ ಕುರುಳಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಆದರೆ ಮರದಡಿ ಸಿಲುಕಿ ಆಟೋ, ಬೈಕ್, ಕಾರು ಜಖಂಗೊಂಡಿದೆ.

ಇದನ್ನು ಕಂಡು ಜನರು ಗಣೇಶನ ಮಹಿಮೆ ಎಂದು ಕೊಂಡಾಡಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.