Saturday, April 19, 2025
Google search engine

Homeಕ್ರೀಡೆದೇವಧರ್ ಟ್ರೋಫಿ ವೇಳಾಪಟ್ಟಿ ಪ್ರಕಟ

ದೇವಧರ್ ಟ್ರೋಫಿ ವೇಳಾಪಟ್ಟಿ ಪ್ರಕಟ

ದೇಶೀಯ ಅಂಗಳದ ಲೀಸ್ಟ್-ಎ ಕ್ರಿಕೆಟ್ ಟೂರ್ನಿ ದೇವಧರ್ ಟ್ರೋಫಿಯ ವೇಳಾಪಟ್ಟಿ ಪ್ರಕಟವಾಗಿದೆ. ಜುಲೈ 24 ರಿಂದ ಶುರುವಾಗಲಿರುವ ಈ ಏಕದಿನ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ.

ಇನ್ನು ಈ ಬಾರಿಯ ದೇವಧರ್ ಟ್ರೋಫಿಗೆ ಆತಿಥ್ಯವಹಿಸುತ್ತಿರುವುದು ಪುದುಚೇರಿ (ಪಾಂಡಿಚೇರಿ). ಅಂದರೆ ಎಲ್ಲಾ ಪಂದ್ಯಗಳನ್ನು ಪುದುಚೇರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಜುಲೈ 24 ರಿಂದ ಶುರುವಾಗುವ ಟೂರ್ನಿಯ ಫೈನಲ್ ಪಂದ್ಯವು ಆಗಸ್ಟ್ 3 ರಂದು ಸೀಚೆಮ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ:

ಉತ್ತರ ವಲಯ vs ದಕ್ಷಿಣ ವಲಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಜುಲೈ 24

ಪೂರ್ವ ವಲಯ vs ಕೇಂದ್ರ ವಲಯ, CAP ಮೈದಾನ 3, ಪುದುಚೇರಿ – ಜುಲೈ 24

ಪಶ್ಚಿಮ ವಲಯ vs ಈಶಾನ್ಯ ವಲಯ, CAP ಮೈದಾನ 2, ಪುದುಚೇರಿ – ಜುಲೈ 24

ಉತ್ತರ ವಲಯ vs ಕೇಂದ್ರ ವಲಯ, CAP ಮೈದಾನ 2, ಪುದುಚೇರಿ – ಜುಲೈ 26

ಪೂರ್ವ ವಲಯ vs ಈಶಾನ್ಯ ವಲಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಜುಲೈ 26

ಪಶ್ಚಿಮ ವಲಯ vs ದಕ್ಷಿಣ ವಲಯ, CAP ಮೈದಾನ 3, ಪುದುಚೇರಿ – ಜುಲೈ 26

ಉತ್ತರ ವಲಯ ವಿರುದ್ಧ ಪೂರ್ವ ವಲಯ, CAP ಮೈದಾನ 3, ಪುದುಚೇರಿ – ಜುಲೈ 28

ಕೇಂದ್ರ ವಲಯ vs ಪಶ್ಚಿಮ ವಲಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಜುಲೈ 28

ದಕ್ಷಿಣ ವಲಯ vs ಈಶಾನ್ಯ ವಲಯ, CAP ಮೈದಾನ 2, ಪುದುಚೇರಿ – ಜುಲೈ 28

ಉತ್ತರ ವಲಯ vs ಪಶ್ಚಿಮ ವಲಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಜುಲೈ 30

ಪೂರ್ವ ವಲಯ vs ದಕ್ಷಿಣ ವಲಯ, CAP ಮೈದಾನ 2, ಪುದುಚೇರಿ – ಜುಲೈ 30

ಕೇಂದ್ರ ವಲಯ vs ಈಶಾನ್ಯ ವಲಯ, CAP ಮೈದಾನ 3, ಪುದುಚೇರಿ – ಜುಲೈ 30

ಉತ್ತರ ವಲಯ vs ಈಶಾನ್ಯ ವಲಯ, CAP ಗ್ರೌಂಡ್ 3, ಪುದುಚೇರಿ – ಆಗಸ್ಟ್ 1

ಕೇಂದ್ರ ವಲಯ vs ದಕ್ಷಿಣ ವಲಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಆಗಸ್ಟ್ 1

ಪೂರ್ವ ವಲಯ vs ಪಶ್ಚಿಮ ವಲಯ, CAP ಮೈದಾನ 2, ಪುದುಚೇರಿ – ಆಗಸ್ಟ್ 1

ಫೈನಲ್ ಪಂದ್ಯ, ಸೀಚೆಮ್ ಕ್ರೀಡಾಂಗಣ, ಪುದುಚೇರಿ – ಆಗಸ್ಟ್ 3

ದಕ್ಷಿಣ ವಲಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಕುನ್ನುಮ್ಮಲ್ (ಉಪನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ರೋಹಿತ್ ರಾಯುಡು, ಕೆಬಿ ಅರುಣ್ ಕಾರ್ತಿಕ್, ದೇವದತ್ ಪಡಿಕ್ಕಲ್, ರಿಕಿ ಭುಯಿ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿಧ್ವತ್ ಕಾವೇರಪ್ಪ, ವಿ. ಕೌಶಿಕ್, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್, ಅರ್ಜುನ್ ತೆಂಡೂಲ್ಕರ್, ಸಾಯಿ ಕಿಶೋರ್.

ಮೀಸಲು ಆಟಗಾರರು: ಸಾಯಿ ಸುದರ್ಶನ್, ನಿಕಿನ್ ಜೋಸ್, ಪ್ರದೋಶ್ ರಣಜನ್ ಪಾಲ್, ನಿತೀಶ್ ಕುಮಾರ್ ರೆಡ್ಡಿ, ಕೆಎಸ್ ಭರತ್.

ಪಶ್ಚಿಮ ವಲಯ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೆಟ್ ಪಟೇಲ್, ಸರ್ಫರಾಝ್ ಖಾನ್, ಅಂಕೀತ್ ಬವಾನೆ, ಸಮರ್ಥ್ ವ್ಯಾಸ್, ಶಿವಂ ದುಬೆ, ಅತಿತ್ ಸೇಠ್, ಪಾರ್ಥ್ ಭುತ್, ಶಮ್ಸ್ ಮುಲಾನಿ, ಅರ್ಝಾನ್ ನಾಗವಾಸ್ವಾಲ್ಲಾ, ಚಿಂತನ್ ಗಜಾ, ರಾಜವರ್ಧನ್ ಹಂಗರ್ಗೆಕರ್.

ಮೀಸಲು ಆಟಗಾರರು: ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೊಡಿಯಾ, ಎ ಖಾಝಿ, ಕಥನ್ ಪಟೇಲ್.

ಉತ್ತರ ವಲಯ ತಂಡ: ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭ್​ಸಿಮ್ರಾನ್ ಸಿಂಗ್, ಎಸ್ ಜಿ ರೋಹಿಲ್ಲಾ, ಎಸ್ ಖಜುರಿಯಾ, ಮನ್ ದೀಪ್ ಸಿಂಗ್, ಹಿಮಾಂಶು ರಾಣಾ, ವಿವ್ರಾಂತ್ ಶರ್ಮಾ, ನಿಶಾಂತ್ ಸಿಂಧು, ರಿಷಿ ಧವನ್, ಯುಧ್ವೀರ್ ಸಿಂಗ್, ಸಂದೀಪ್ ಶರ್ಮಾ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ.

ಮೀಸಲು ಆಟಗಾರರು: ಮಯಾಂಕ್ ದಾಗರ್, ಮಯಾಂಕ್ ಯಾದವ್, ಅರ್ಸ್ಲಾನ್ ಖಾನ್, ಶುಭಂ ಅರೋರಾ, ಯುವರಾಜ್ ಸಿಂಗ್, ಮನನ್ ವೋಹ್ರಾ, ಅಕಿಬ್ ನಬಿ, ಶಿವಾಂಕ್ ವಶಿಷ್ಟ್.

RELATED ARTICLES
- Advertisment -
Google search engine

Most Popular