ಕಾರವಾರ: ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಕಾಣೆಯಾಗಿರುವ ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್‌ಇಎಲ್‌ನಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಉದ್ಯೋಗ ಕೊಡಿಸಿದ್ದಾರೆ.
ಶಿರೂರು ಗುಡ್ಡ ಕುಸಿತದ ಬಳಿಕ ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್‌ಡಿಕೆ ಕೃತಿಕಾ ಅವರಿಗೆ ಉದ್ಯೋಗ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಇದೀಗ ನೀಡಿದ ಭರವಸೆಯಂತೆ ಕೃತಿಕಾ ಅವರಿಗೆ ಉದ್ಯೋಗ ಕೊಡಿಸಿದ್ದಾರೆ. ಜೊತೆಗೆ ಹೆಚ್‌ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ದೂರವಾಣಿ ಕರೆ ಮಾಡಿ ಉದ್ಯೋಗ ಖಾತರಿಪಡಿಸಿದ್ದಾರೆ.
ಜಗನ್ನಾಥ ಅವರ ಇನ್ನೋರ್ವ ಪುತ್ರಿ ಪಲ್ಲವಿ ನಾಯ್ಕ ಅವರಿಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯ ಸರ್ಕಾರ ಉದ್ಯೋಗ ನೀಡಿತ್ತು. ಜುಲೈ ೧೬ ರಂದು ಶಿರೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದಲ್ಲಿ ೧೧ ಮಂದಿ ಕಾಣೆಯಾಗಿ, ೮ ಜನರ ಮೃತದೇಹ ಪತ್ತೆಯಾಗಿತ್ತು.