ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ ಬಯಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ೧೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಸ್ಥಾನಕ್ಕೆ ಬಿ.ಶೀಲ, ಎ.ಇ.ಅನುಪಮ, ಪರಿಶಿಷ್ಟ ಪಂಗಡ ಸ್ಥಾನದಿಂದ ಕೃಷ್ಣನಾಯಕ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಎಸ್.ವಿ.ಗೋವಿಂದರಾಜು, ಸಾಮಾನ್ಯ ಸ್ಥಾನದಿಂದ ಕೆ.ಟಿ.ಸ್ವಾಮಿ, ಹಿಂದುಳಿದ ವರ್ಗ ಎ.ಸ್ಥಾನದಿಂದ ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಇವರ ಜೊತೆಗೆ ಸಾಮಾನ್ಯ ಸ್ಥಾನದಿಂದ ಆಯ್ಕೆ ಬಯಸಿ ಎಂ.ಮಂಜುರಾಜ್, ಸೈಯದ್‌ರಿಜ್ವಾನ್, ಶಿವಮೂರ್ತಿ, ಎನ್.ಎಲ್.ಮುರಳೀಧರ, ಸಿ.ಎಸ್.ಮಂಜುನಾಥ್, ರವಿ, ಪ್ರಕಾಶ್ ಮತ್ತು ಟಿ.ಪುರುಷೋತ್ತಮ, ಚುನಾವಣಾಧಿಕಾರಿ ಕೆ.ಎಲ್.ಸವಿತಾ ಅವರಿಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು.
ಅದರೆ ನಾಮಪತ್ರಸಲ್ಲಿಕೆಗೆ ಕೊನೆಯ ದಿನ ಇವರುಗಳನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಸಮಾನ ಮನಸ್ಕರ ಪ್ರಗತಿಪರ ವೇದಿಕೆಯ ಅಧ್ಯಕ್ಷ ಸಿ.ಎನ್.ಪ್ರಭು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ , ಪ್ರಧಾನ ಕಾರ್ಯ ದರ್ದಸಿ ಸ್ವಾಮಿ ಎಸ್.ಎಂ.ಪಿ.ವಿಯ ಗೌರವಾಧ್ಯಕ್ಷ ಒಂಟಿಮನೆ ನಾಗರಾಜು, ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷ ಮೋಹನ್ ಕುಮಾರ್ , ಕಾರ್ಯದರ್ಶಿ ಗಂಗಾಧರ್ , ಶಿಕ್ಷಕರಾದ ಕೃಷ್ಣನಾಯಕ, ಮುತ್ತೇಶಚಾರಿ, ಪುಟ್ಟಯ್ಯ, ಸಿದ್ದಯ್ಯ, ಶ್ರೀಧರ,ಕಮಲಮ್ಮ,ಶಿವಮ್ಮ,ಪ್ರಕಾಶ್ ದೇವರಾಜೇಗೌಡ, ಸುರೇಶ,ನಾಗರಾಜ್,ಚಿಕ್ಕೇಗೌಡ,ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದು ನೂತನ ನಿರ್ದೇಶಕರನ್ನು ಅಭಿನಂಧಿಸಿದರು.