Sunday, April 20, 2025
Google search engine

Homeಸ್ಥಳೀಯಜಿಪಂ ಸಿಇಓ ರಿಂದ ತಾಲ್ಲೂಕು ಇಒಗಳ ಪ್ರಗತಿ ಪರಿಶೀಲನೆ

ಜಿಪಂ ಸಿಇಓ ರಿಂದ ತಾಲ್ಲೂಕು ಇಒಗಳ ಪ್ರಗತಿ ಪರಿಶೀಲನೆ

ಮೈಸೂರು: ಜಿಲ್ಲಾ ಪಂಚಾಯತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಬುಧವಾರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು, ಮ-ನರೇಗಾ ಯೋಜನೆಯಡಿಯಲ್ಲಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸಲು ಸೂಚನೆ ನೀಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿಗಳ ಪ್ರಗತಿ, ಅಮೃತ ಸರೋವರ ಯೋಜನೆ ಪ್ರಗತಿ, ಪಂಚ ಅಭಿಯಾನ ಪ್ರಗತಿ, ಗೋಮಾಳ ಪ್ರಗತಿ ಹಾಗೂ ಸ್ವಚ್ಛ ಭಾರತ್ ಅಭಿಯಾನ, ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಬೂದು ನೀರು ನಿರ್ವಹಣೆ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ – ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮತ್ತು ಕಸ ಸಂಗ್ರಹಣೆ ಪ್ರಾರಂಭಿಸಿರುವ ಕುರಿತು ಚರ್ಚಿಸಿದರು.

ಜಲಜೀವನ್ ಮಿಷನ್/ಕುಡಿಯುವ ನೀರು ಯೋಜನೆ, ವಸತಿ ಯೋಜನೆ, ಘನ ತ್ಯಾಜ್ಯ ವಿಲೇವಾರಿ ಸಂಬಂಧ ತರಬೇತಿ ಪಡೆದಿರುವ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಿಂದ ಕಸ ವಿಲೇವಾರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು.

ಎನ್.ಆರ್.ಎಲ್.ಎಂ ಯೋಜನೆಯಲ್ಲಿ ಶೆಡ್ ಕಾಮಗಾರಿ ಪ್ರಗತಿ ಸ್ವ ಸಹಾಯ ಗುಂಪಿನ ಮಹಿಳೆಯರಿಂದ ಸೇವೆ ಪಡೆಯುವ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.

ಒಂದು ವಾರದೊಳಗೆ ಎಲ್ಲಾ ಗ್ರಾ.ಪಂಗಳನ್ನು ಡಿಜಿಟಲ್‌ ಗ್ರಂಥಾಲಯಗಳನ್ನಾಗಿ ಮಾರ್ಪಾಡು ಮಾಡಿ, ಮಕ್ಕಳ ನೊಂದಣಿ ಯನ್ನು ಶೇ100 ಮಾಡಿಸುವುದು.

 ಇ-ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ದೂರದೃಷಿ ಯೋಜನೆ ಪ್ರಗತಿ, ಗ್ರಾ.ಪಂ ಸಿಬ್ಬಂದಿಗಳು ಮತ್ತು ಸರ್ಕಾರಿ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಗ್ರಾ.ಪಂ ಕ್ಕೆ ತೆರಳಿ ಬಯೋಮೇಟ್ರಿಕ್‌ ಮೂಲಕ ಹಾಜರಾತಿ ಹಾಕಿ ಪ್ರತಿ ಮಾಹೆ   ಬಯೋಮೇಟ್ರಿಕ್ ಹಾಜರಾತಿ ಪರಿಶೀಲಿಸಿ ವೇತನ ಪಾವತಿಸುವಂತೆ ತಿಳಿಸಲಾಯಿತು. ಆರ್ ಟಿ ಸಿ ವಿತರಿಸಿರುವ ಕುರಿತು ಚರ್ಚಿಸಲಾಯಿತು. ಹಾಗೂ ಬಾಕಿ ಮತ್ತು ಪ್ರಸ್ತುತ ಸಾಲಿನ ಬೇಡಿಕೆ ತೆರಿಗೆ ವಸೂಲಾತಿ ಮಾಡಲು & ಬಾಪುಜಿ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ಜ್ಯೋತಿ ಅರ್ಜಿಗಳನ್ನು ಹಾಕುವಂತೆ ಕಟ್ಟುನಿಟ್ಟಿನ ಕ್ರಮಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಸೌಮಿತ್ರ, ಮುಖ್ಯ ಲೆಕ್ಕಾಧಿಕಾರಿ ನಂದಾ ಹೆಚ್ ಇ,  ಯೋಜನಾ ನಿರ್ದೇಶಕರಾದ ಸವಿತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾ.ಪಾ.ಇಂ., ಮತ್ತು ಎಲ್ಲಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ) ಸೇರಿ ಇತರೆ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular