ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ :’ ನಮ್ಮ ಸರ್ಕಾರದ ಮಹತ್ತರವಾದ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿಯು ಮಹತ್ವಾಕಾಂಕ್ಷಿಯ ಯೋಜನೆಯಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ತಿಳಿಸಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳ ಪ್ರತಿಭೆಯನ್ನು ಕಾರಂಜಿಯಂತೆ ಹೊರಹೊಮ್ಮಿಸಬೇಕು, ಪ್ರತಿಭಾ ಕಾರಂಜಿ ಎಂದಾಕ್ಷಾಣ ಶಿಕ್ಷಕರಲ್ಲಿರುವ ಪ್ರತಿಭೆಯನ್ನು ಮಕ್ಕಳ ಮೂಲಕ ಹೊರಹೊಮ್ಮಿಸುವ ಕೆಲಸವಾಗಿದೆ, ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು.

ಒಂದು ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ, ಕ್ರೀಡೆ, ಪ್ರತಿಭಾ ಕಾರಂಜಿ ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆಯನ್ನು ತೋರಬೇಕು’ ಎಂದು ತಿಳಿಸಿದರು.
‘ಗ್ರಾಮೀಣ ಮಕ್ಕಳಲ್ಲಿ ಹೆಚ್ಚಿನ ಪ್ರತಿಭೆ ಕಂಡುಬರುತ್ತದೆ. ಅದನ್ನು ಗುರುತಿಸುವ ಕೆಲಸವು ಸಹ ಆಗಬೇಕು’ ಎಂದು ಶಿಕ್ಷಕರಿಗೆ ಕರೆ ನೀಡಿದರು.
ಪುರಸಭಾ ಸದಸ್ಯ ಐಡಿಯಾ ವೆಂಕಟೇಶ್ ಮಾತನಾಡಿ ‘ಶಿಕ್ಷಕರು ಮಕ್ಕಳಿಗೆ ಭೋದನೆ ಮಾಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಯತ್ತ ಗಮನಹರಿಸಬೇಕು, ಅಲ್ಲದೇ ಸಮಾಜದಲ್ಲಿ ಉತ್ತಮ ರೀತಿ ಬದುಕುವ ರೀತಿ ರಿವಾಜುಗಳನ್ನು ತಿಳಿಹೇಳಬೇಕು ಎಂದರು.

ತಾಲ್ಲೂಕು ಈ ಭಾರಿ ಎಸ್.ಎಸ್.ಎಲ್.ಸಿ ಯಲ್ಲಿ 9ನೇ ಸ್ಥಾನವನ್ನು ಪಡೆದಿದ್ದು, ಶಿಕ್ಷಣ ಮಟ್ಟ ಕುಸಿದಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳು ವಿಫಲವಾಗಿವೆ. ಇದಕ್ಕೆ ಕಾರಣ ಹುಡುಕಬೇಕು.
- ಮಿಲ್ ನಾಗರಾಜು, ಪುರಸಭಾ ಸದಸ್ಯ
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಯ್ಯ, ರಂಗರಾಜು, ಕೃಷ್ಣಮೂರ್ತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಧಾಕ್ಷಾಯಿಣಿ, ಪುರಸಭಾ ಸದಸ್ಯರಾದ ರಾಜು ವಿಶ್ವಕರ್ಮ, ಆಸಿಫ್ ಇಕ್ಬಾಲ್, ಐಡಿಯಾ ವೆಂಕಟೇಶ್, ಮಧುಕುಮಾರ್, ಮಿಲ್ ನಾಗರಾಜು, ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ನರೇಂದ್ರ ಬಾಬು, ಸಿಆರ್‌ಪಿ ಎಂ. ದೀಪಾ, ಕಾಮಾಕ್ಷಿ, ಕೆಂಪರಾಜು, ಬಿ.ಆರ್.ಪಿ, ಬಸವರಾಜು, ಜಯಶಂಕರ್, ಪ್ರಕಾಶ್, ಪ್ರಮೋದ್, ಪುರುಷೋತ್ತಮ್, ಪ್ರಭು, ರೂಪ, ಶಿಕ್ಷಣ ಸಂಯೋಜಕ ಜಯರಾಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಸ್. ಮಹದೇವು, ಶಿವಕುಮಾರ್, ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ರಂಗೇಗೌಡ, ರಾಮಚಂದ್ರ, ಶೇಖರ್, ಆನಂದ್, ಅಂಥೋಣಿ ಪ್ರಭು, ಸಿದ್ದರಾಜು, ಚಂದ್ರಕುಮಾರ್, ಯಶವಂತ್, ನಂಜಯ್ಯ, ಚಿಕ್ಕನಾಯಕ, ಮಂಜುನಾಥ್, ಅಶೋಕ್, ಗುರುಸ್ವಾಮಿ, ಚನ್ನನಾಯಕ, ಅಂಕೇಗೌಡ, ಸರಿತಾ ಇದ್ದರು.