Saturday, April 19, 2025
Google search engine

Homeರಾಜಕೀಯಮುಸ್ಲಿಮರಿಂದ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳದಿದ್ದರೆ ನಾವು ಹಿಡಿಯಬೇಕಾಗುತ್ತೆ: ಪ್ರತಾಪ್ ಸಿಂಹ ಎಚ್ಚರಿಕೆ

ಮುಸ್ಲಿಮರಿಂದ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳದಿದ್ದರೆ ನಾವು ಹಿಡಿಯಬೇಕಾಗುತ್ತೆ: ಪ್ರತಾಪ್ ಸಿಂಹ ಎಚ್ಚರಿಕೆ

ಮೈಸೂರು: ಮುಸ್ಲಿಮರ ಬಳಿ ಇರುವ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು.

ಬೇರೆ ಜಿಲ್ಲೆಗಳಲ್ಲಿ ಅದ್ದೂರಿಯಾಗಿ ಗಣೇಶ ಮೆರವಣಿಗೆಗಳು ನಡೆಯುತ್ತವೆ. ಅಷ್ಟರೊಳಗೆ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ನಿಯಂತ್ರಣ ಹೇರದಿದ್ದರೆ ನಮ್ಮ ರಕ್ಷಣೆ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಹಾಗೂ ನಂತರದ ಗಲಭೆಯ ಬೆನ್ನಲ್ಲೇ ಪ್ರತಾಪ್ ಸಿಂಹ ಈ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ತಲೆದಂಡ ಖಚಿತ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡ ಖಚಿತ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಮುಡಾ ಹಗರಣ ವಿಚಾರ ಕೋರ್ಟ್‌ನಲ್ಲಿದೆ. ಆ ಕೇಸ್ ವಿಚಾರ ಏನೇ ಆಗಲಿ ಅದು ಬೇರೆ ವಿಚಾರ. ಆದರೆ, ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ. ಅರ್ಥಿಕ ಹಗರಣ ಆದಾಗ ಅದಕ್ಕೆ ಅರ್ಥಿಕ ಸಚಿವರೇ ಹೊಣೆಗಾರರು. ಸಿಎಂ ಅವರೇ 88 ಕೋಟಿ ರೂಪಾಯಿ ಅವ್ಯವಹಾರ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

ವಾಲ್ಮೀಕಿ ನಿಗಮದ ದುಡ್ಡಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಮಾಡಲಾಗಿದೆ. ಆ ಹಣವನ್ನು ಮದ್ಯ ಖರೀದಿಗೆ ಬಳಸಿರುವುದು ಸಾಬೀತಾಗಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದು ಹೇಳಿದರು.

ಮುಡಾ ವಿಚಾರದಲ್ಲಿ ನಾನು ಮೊದಲೇ ಸೈಟ್ ವಾಪಾಸ್ ಕೊಡಿ ಎಂದು ಹೇಳಿದ್ದೆ. ನನ್ನ ಕಾಳಜಿಯುತ ಸಲಹೆಯನ್ನು ಸಿಎಂ ಕೇಳಲಿಲ್ಲ. ಈಗ ಈ ವಿಚಾರವಾಗಿ ಮುಂಚಿತವಾಗಿಯೇ ರಾಜೀನಾಮೆ ಕೊಡಿ ಅಂದರೆ ನನ್ನಂತಹ ಸಣ್ಣವನ ಮಾತು ಅವರು ಕೇಳುತ್ತಾರಾ ಎಂದು ಅವರು ಪ್ರಶ್ನಿಸಿದರು.

ಮಹಿಷಾ ದಸರಾಗೆ ವಿರೋಧ

ನಾನು ಸಂಸದನಾಗಿದ್ದರೂ ಅಷ್ಟೇ ಆಗಿಲ್ಲದಿದ್ದರೂ ಅಷ್ಟೆ ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ. ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಯಾರ ನಿಲುವುಗಳು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular