ಮಂಗಳೂರು: ಮಂಗಳೂರಿನ ಪಿಲಿಕುಳ ಕಂಬಳದ ಪೂರ್ವಭಾವಿ ಸಭೆಗೆ ಶಾಸಕ ಉಮಾನಾಥ ಕೋಟ್ಯಾನ್ ರನ್ನು ಕರೆಯದೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ಮೂಡ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಸುಳ್ಳು ಆರೋಪ ಮಾಡಿದ್ದಾರೆ. ಕಳೆದ ಐದು ವರ್ಷದಲ್ಲಿ ಪಿಲಿಕುಳದಲ್ಲಿ ಏನು ಅಭಿವೃದ್ಧಿ ಆಗಿದೆ. ಇವ್ರು ಐದು ವರ್ಷಗಳಲ್ಲಿ ಏನುಮಾಡಿದ್ದಾರೆ…? ಮಾತ್ರವಲ್ಲದೇ, ಸರ್ಕಾರಿ ಕಾರ್ಯಕ್ರಮದಲ್ಲಿ ಜಾತಿ ವಿಚಾರವಾಗಿ ಮಾತನಾಡ್ತಾರೆ.ಇದು ಬಿಲ್ಲವ ಸಮಾಜಕ್ಕೆ ಅವಮಾನ ಎಂದೂ ಜಾತಿ ರಾಜಕಾರಣವನ್ನು ಎತ್ತಿ ಕಟ್ಟಿದ್ದಾರೆ.
ಇವರಿಗೆ ಈಗಾ ಬಿಲ್ಲವ ಸಮಾಜದ ಮೇಲೆ ಮೋಹ ಬಂದಿದೆ. ಇವ್ರ ಪಕ್ಷದ ಜಗದೀಶ್ ಅಧಿಕಾರಿ ಬಿಲ್ಲವ ಸಮಾಜದ ಬಗ್ಗೆ ಕೀಳಾಗಿ ಮಾತನಾಡಿದ್ರು. ಬಿಲ್ಲವ ನಾಯಕ ಪೂಜಾರಿ ಅವರನ್ನು ಕೀಳಾಗಿ ಮಾತನಾಡಿದ್ರು. ಆ ವೇಳೆ ಇವ್ರು ಇಲ್ಲಿದ್ರು ಆಗ ಅವರಿಗೆ ಬಿಲ್ಲವ ಸಮಾಜ ನೆನಪಾಗಿಲ್ವ. ಪಿಲಿಕುಳ ಕಾರ್ಯಕ್ರಮಕ್ಕೆ ಎಂಎಲ್ಎ ಅವರನ್ನು ಕರೆದಿಲ್ಲ ಅಂತಾರೆ ಜಿಲ್ಲಾಧಿಕಾರಿ ಇವ್ರ ಶಾಸಕರಿಗೆ ಕರೆ ಮಾಡಿದ್ರು ಮತ್ತು ಸಂದೇಶ ನೀಡಿದ್ದಾರೆ. ಆದ್ರೆ ಇವ್ರ ಮನೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕರೆಯಬೇಕಾ…? ಇವ್ರ ಆಡಳಿತದಲ್ಲಿ ಅನೇಕ ಕಾರ್ಯಕ್ರಮ ಗಳಿಗೆ ಎಂಎಲ್ಸಿ ಹರೀಶ್ ಕುಮಾರ್ ಅವರನ್ನು ಕರೆದಿದ್ರ. ಕಳೆದ ಇವ್ರ ಆಡಳಿತದಲ್ಲಿ ಇವ್ರು ಶಾಸಕರಾಗಿ ಏನು ಮಾಡಿದ್ದಾರೆ.ಕಂಬಳದಲ್ಲೂ ಜಾತಿ ರಾಜಕಾರಣ ಮಾಡುವ ಅಗತ್ಯ ಇದೆಯೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ಡಿಸಿ ಅವರಿಗೆ ಅವರ ಕೆಲಸದ ಬಗ್ಗೆ ಗೊತ್ತಿದೆ ಅವರು ಯಾರನ್ನು ಕೇಳಿ ಅವರ ಕೆಲಸ ಮಾಡಬೇಕಿಲ್ಲ. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಿಲಿಕುಳ ಕಂಬಳಕ್ಕೂ, ಬಿಲ್ಲವ ಸಮುದಾಯಕ್ಕೂ ಏನು ಸಂಬಂಧ? ಇದರಲ್ಲಿ ಜಾತಿ ವಿಷಯವನ್ನು ಎತ್ತಿ ಕಟ್ಟೋದು ಎಷ್ಟು ಸಮಂಜಸ ಎಂದರು.