Saturday, April 19, 2025
Google search engine

Homeರಾಜ್ಯಸುದ್ದಿಜಾಲಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಷೇರುದಾರ ರೈತರಿಗೆ 1.75 ಕೋಟಿ ರೂ ಸಾಲ ವಿತರಣೆ-ಚಿಕ್ಕಕೊಪ್ಪಲು ಸಿ.ಬಿ.ಸಂತೋಷ್

ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಷೇರುದಾರ ರೈತರಿಗೆ 1.75 ಕೋಟಿ ರೂ ಸಾಲ ವಿತರಣೆ-ಚಿಕ್ಕಕೊಪ್ಪಲು ಸಿ.ಬಿ.ಸಂತೋಷ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ‌ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಷೇರುದಾರ ರೈತರಿಗೆ 2024-25ನೇ ಸಾಲಿನಲ್ಲಿ 1.75 ಕೋಟಿ ರೂಗಳನ್ನು ವಿವಿಧ ಸಾಲವಾಗಿ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಿಕ್ಕಕೊಪ್ಪಲು ಸಿ.ಬಿ.ಸಂತೋಷ್ ಹೇಳಿದರು.

ಶುಕ್ರವಾರ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಾಲದಲ್ಲಿ ಕೆಸಿಸಿ 1.23 ಕೋಟಿ ಮತ್ತು ಎಸ್.ಎಚ್.ಜಿ ಸಾಲವಾಗಿ 50 ಲಕ್ಷ ರೂ ವಿತರಿಸಿದ್ದು ಇದರ ಜತಗೆ 2023-24ನೇ ಸಾಲಿನಲ್ಲಿ ರೈತರಿಗೆ 5 ಕೋಟಿ ಸಾಲ ನೀಡುವ ಮೂಲಕ ಸಂಘವು 2.95 ಲಕ್ಷ ರೂ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

2024-25 ಸಾಲಿನಲ್ಲಿ ಸಂಘವು ಕೆ.ಸಿ.ಸಿ, ಬೆಳೆಸಾಲವನ್ನು 6 ಕೋಟಿಗಳಿಗೆ ಹೆಚ್ಚಿಸುವುದು,ಮಧ್ಯಮಾವದಿ ಬೋರ್‌ವೆಲ್ ಸಾಲ ಮತ್ತು ಐ.ಪಿ. ಸೆಟ್ ಸಾಲ ಹಾಗೂ ಟ್ರ್ಯಾಕ್ಟರ್, ಸಾಲವನ್ನು ನೀಡುವುದು, ಎಸ್.ಹೆಚ್.ಜಿ. ಸಂಘಗಳನ್ನು ರಚಿಸಿ ಅವುಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಂಘದ ಷೇರುದಾರ ರೈತರಾದ ಕುಪ್ಪೆ ಡಿ. ರಾಮಕೃಷ್ಣೇಗೌಡ, ಸಿ.ಎಚ್.ಸ್ವಾಮೀಗೌಡ ಅವರು
ಅವರು ಸಂಘದ ಅಭಿವೃದ್ದಿಗೆ ಕೈಗೊಳ್ಳಬೇಕಾದ ಪೂರಕವಾದ ಕೆಲಸ ಕಾರ್ಯಗಳ ಕುರಿತು ಸಲಹೆ ನೀಡಿ ಸಂಘದ ನೂತನ‌ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ಆದ್ಯತೆ ನೀಡಿ ಜತಗೆ ರೈತರಿಗೆ ಸಂಘದ ವತಿಯಿಂದಲೇ ರಸಗೊಬ್ಬರ ಮತ್ತು ಪಡಿತರ ವಿರಣೆಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ‌ ಸಂಘದ ಉಪಾಧ್ಯಕ್ಷೆ ಕಲ್ಯಾಣಮ್ಮ ನಿರ್ದೇಶಕರಾದ ಜಿ.ಎಸ್.ವಿಶ್ವೇಶ್ವರಯ್ಯ ,ಸಿ.ಟಿ. ಸ್ವಾಮಿಗೌಡ,
ಕೆ.ಆರ್. ಮಂಜುನಾಥ್, ಸೋಮಪ್ಪ, ಸತೀಶ್. ಡಿ ಪುನೀತ್‌ , ಜಿ.ಕುಮಾರಸ್ವಾಮಿ, ಜವರನಾಯಕ, ದಾಸಯ್ಯ,
ರುಕ್ಷೀಣಮ್ಮ, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಮೂಡಲ ಕೊಪ್ಪಲು ಎನ್. ದಿನೇಶ್‌, ಸಂಘದ ಸಿಇಓ ಪುನೀತ್‌ ಕುಮಾರ್, ಸಹಾಯಕ ಸಿ.ಜಿ ಜಗನ್ನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular