Saturday, April 19, 2025
Google search engine

Homeರಾಜ್ಯಆಗ್ರಾದಲ್ಲಿ ಭಾರೀ ಮಳೆ: ತಾಜ್ ಮಹಲ್ ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

ಆಗ್ರಾದಲ್ಲಿ ಭಾರೀ ಮಳೆ: ತಾಜ್ ಮಹಲ್ ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು ೨೫೦ ಕಿಮೀ ದೂರದಲ್ಲಿರುವ ಆಗ್ರಾದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಜ್ ಮಹಲ್‌ನಲ್ಲಿ ನೀರು ಸೋರಿಕೆಯಾಗಿದೆ.

ಮುಖ್ಯ ಗುಮ್ಮಟದ ಮೇಲೆ ತೇವಾಂಶ ಗಮನಿಸಿದ ನಂತರ ಅಧಿಕಾರಿ ಗುಮ್ಮಟ ಬಿರುಕು ಬಿಟ್ಟಿರಬಹುದು ಎಂದು ಅಂದಾಜಿಸಿದ್ದರು. ಆದರೆ ಪರಿಶೀಲಿಸಿದಾಗ ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ದೇಶದಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ನೋಡಿಕೊಳ್ಳುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋರಿಕೆ ವರದಿಯಾದ ನಂತರ ತನ್ನ ಸಿಬ್ಬಂದಿಯನ್ನು ಕಣ್ಗಾವಲು ಇರಿಸಿದೆ.

೧೭ ನೇ ಶತಮಾನದ ಸಮಾಧಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ.ಆಗ್ರಾ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಅವರು ತಪಾಸಣೆ ನಡೆಸಲು ಡ್ರೋನ್ ಕ್ಯಾಮೆರಾಗಳನ್ನು ಬಳಸಿದ್ದಾರೆ. ಏತನ್ಮಧ್ಯೆ, ಜಲಾವೃತಗೊಂಡ ಉದ್ಯಾನದ ದೃಶ್ಯಗಳು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ಸ್ಮಾರಕದ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಬೇಕು ಏಕೆಂದರೆ ಪ್ರವಾಸೋದ್ಯಮ ಉದ್ಯಮದ ಜನರಿಗೆ ಇದು ಏಕೈಕ ಭರವಸೆಯಾಗಿದೆ” ಎಂದು ಸರ್ಕಾರದಿಂದ ಅನುಮೋದಿತ ಪ್ರವಾಸಿ ಮಾರ್ಗದರ್ಶಿ ಮೋನಿಕಾ ಶರ್ಮಾ ಹೇಳಿದ್ದಾರೆ.

ಆಗ್ರಾದ ಇತರ ಐತಿಹಾಸಿಕ ಸ್ಥಳಗಳಾದ ಆಗ್ರಾ ಕೋಟೆ, ಫತೇಪುರ್ ಸಿಕ್ರಿ, ಜುಂಜುನ್ ಕಾ ಕಟೋರಾ, ರಾಮ್‌ಬಾಗ್, ಮೆಹ್ತಾಬ್ ಬಾಗ್, ಚಿನಿ ಕಾ ರೌಜಾ, ಸಿಕಂದ್ರದಲ್ಲಿರುವ ಅಕ್ಬರ್ ಸಮಾಧಿ ಮತ್ತು ರೋಮನ್ ಕ್ಯಾಥೋಲಿಕ್ ಸ್ಮಶಾನಕ್ಕೂ ಸಹ ಭಾರೀ ಮಳೆಯಿಂದಾಗಿ ಸಣ್ಣ ಹಾನಿ ಸಂಭವಿಸಿವೆ ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular